ಮಳಲಿ ಶ್ರೀ ರಾಮಾಂಜನೇಯ ಭಜನಾ ಮಂದಿರದ 75ನೇ ವರ್ಷದ ಭಜನಾ ಮಂಗಳೋತ್ಸವ: ಪೂರ್ವಭಾವಿ ಸಮಾಲೋಚನಾ ಸಭೆ
ಕೈಕಂಬ: ಶ್ರೀ ರಾಮಾಂಜನೇಯ ಭಜನಾ ಮಂದಿರ ಮಳಲಿ ಇದರ 75ನೇ ವರ್ಷದ ಭಜನಾ ಮಂಗಳೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಸೆಪ್ಟೆಂಬರ್ 8 ರಂದು ಭಾನುವಾರದಂದು ಭಜನಾ ಮಂದಿರದಲ್ಲಿ ನಡೆಯಿತು.
ಅಮೃತ ಮಹೋತ್ಸವ ವರ್ಷದ ಮಂಗಳೊತ್ಸವ ಪ್ರಯುಕ್ತವಾಗಿ 2025 ಫೆಬ್ರವರಿ 6,7,8,9 ರಂದು 3 ದಿನಗಳ ಅಖಂಡ ಭಜನಾ ಸಂಕೀರ್ತನೆ ಮತ್ತು 9 ರಂದು ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಮಾಲೋಚನಾ ಸಭೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ವೀರಪ್ಪ ಕುಲಾಲ್, ಗೌರವಾಧ್ಯಕ್ಷ ಸುಧಾಕರ ಕುಲಾಲ್, ಕಾರ್ಯದರ್ಶಿ ಉಮೇಶ್ ಮಳಲಿ, ಉಪಾಧ್ಯಕ್ಷ ಸದಾಶಿವ ಮಳಲಿ, ಕೋಶಾಧಿಕಾರಿ ರಾಜೇಶ್ ಕುಕ್ಕುರಿ, ಮಂದಿರದ ಅರ್ಚಕ ರಮೇಶ್ ಆಚಾರ್ಯ, ಉದ್ಯಮಿ ಆಶೀಶ್ ದಾಸ್, ಗಂಜಿಮಠ ಗ್ರಾ.ಪಂ. ಸದಸ್ಯ ಸೀತಾರಾಮ್ ಪೂಜಾರಿ, ವಜ್ರಕ್ಷ ಮತ್ತು ಭಜನಾ ಮಂದಿರದ ಅಧ್ಯಕ್ಷ ಶ್ರೀನಿಧಿ ಮಳಲಿ, ಕಾರ್ಯದರ್ಶೀ ವಿಶಾಲ್,ಉಪಾಧ್ಯಕ್ಷ ನವೀನ್ ಮಳಲಿ, ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.