ರಾಜಕೀಯ, ಧಾರ್ಮೀಕ ಮುಖಂಡ ಮಟ್ಟಿ ದೋಗು ಪೂಜಾರಿ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮದ ಮಳಲಿ ಮಟ್ಟಿ ದೋಗು ಪೂಜಾರಿ(೬೫) ಅಸೌಖ್ಯದಿಂದ ಸೆ.೧೧ರಂದು ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು.

ದೋಗು ಪೂಜಾರಿಯವರು ಬಡವರ ಸಮಸ್ಯೆಗಳಿಗೆ ಸತತ ಹೋರಾಟಗಳನ್ನು ನಡೆಸಿಕೊಂಡು ಬಂದವರು. ಧಾರ್ಮೀಕ ಮುಖಂಡರಾಗಿ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ, ವಿವಿಧ ಸಂಘ ಸಂಸ್ಥೆಗಳಲ್ಲಿಯು ಗುರುತಿಸಿಕೊಂಡು ಭಾರತೀಯ ಜನತಾಪಕ್ಷದ ಸಕ್ರೀಯ ಸದಸ್ಯರಾಗಿದ್ದರು. ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿ, ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿಪಾಡಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ವಿವಿಧ ಧಾರ್ಮೀಕ ಮತ್ತು ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದುಕೊಂಡರು. ಅವರು ಪತ್ನಿ ಒರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.
ಅವರ ಅಂತ್ಯೆ ಕ್ರೀಯೆಯು ಮಟ್ಟಿ ಮನೆಯ ವಠಾರದಲ್ಲಿ ಜರಗಲಿದೆ.