ಯಾರು ಬಿಟ್ಟರೂ ಗುಳಿಗ ಬಿಡಲಿಲ್ಲ, ತನ್ನ ಕಟ್ಟೆ ನಿರ್ಮಾಣ ಆಗುವವರೆಗೆ ವೆನ್ಲಾಕ್ ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನು ಬಿಡಲಿಲ್ಲ ಗುಳಿಗ
ಮಂಗಳೂರು: ದಕ್ಷಿಣ ಕನ್ನಡ ದೈವಗಳ ನಾಡು, ಇಲ್ಲಿ ಪ್ರತಿಯೊಂದು ಸತ್ಯಗಳು ಕೂಡ ಕಾರ್ಣಿಕ ರೂಪದ್ದೇ, ಅದರಲ್ಲೂ ಗುಳಿಗ ಅಂತೂ ಕೋಪಿ ಹಾಗೂ ರುದ್ರ ರೂಪದ ದೈವ, ಇದೀಗ ಈ ಆ ದೈವ ತನ್ನ ಕಾರ್ಣಿಕವನ್ನು ತೋರಿಸಿದೆ. ಮಂಗಳೂರಿನ ಜಿಲ್ಲಾಸ್ಪತ್ರೆ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಗುಳಿಗ ದೈವದ ಕಟ್ಟೆ ತೆರವು ಮಾಡಲಾಗಿತ್ತು. ಕಟ್ಟೆ ತೆರವಿನ ಬಳಿಕ ಅಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದೆ ಎಂದು ಹೇಳಲಾಗಿದೆ.
ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಈ ಹಿಂದೆ ಗುಳಿಗನ ಕಟ್ಟೆ ಇತ್ತು. ನಿರ್ಮಾಣವಾಗಿರುವ ಕಟ್ಟಡ ಜಾಗದಲ್ಲಿ ದೊಡ್ಡ ಅಶ್ವಥ ಮರದ ಕಟ್ಟೆ ಇತ್ತು. ಅಶ್ವಥ ಮರದ ಕಟ್ಟೆಯಲ್ಲಿ ನೆಲೆಯೂರಿತ್ತು ಕಾರಣಿಕದ ಗುಳಿಗ ದೈವ ಕಲ್ಲು ಇತ್ತು. ಇನ್ನು ಕಟ್ಟಡ ನಿರ್ಮಾಣಕ್ಕೆ ಅಶ್ವಥ ಮರದ ಸ್ಥಳಾಂತರ ಮಾಡಲಾಗಿತ್ತು.
ಕಟ್ಟಡದ ಕಾಮಗಾರಿ ಆರಂಭದ ಬಳಿಕ ಕಾರ್ಮಿಕರಿಗೆ ಆಸ್ಪತ್ರೆ ಸಿಬ್ಬಂದಿಗೆ ಸಮಸ್ಯೆ ಶುರುವಾಗಿದೆ. ಒ.ಟಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಸಿಬ್ಬಂದಿಗೆ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದರು. ಅಕಾಲಿಕ ಸಾವು ನೋವಿನ ಬಳಿಕ ಸರ್ಕಾರಿ ವೈದ್ಯಾಧಿಕಾರಿ, ಅಧಿಕಾರಿ ಸಿಬ್ಬಂದಿಗಳಿಂದ ಪ್ರಶ್ನಾಚಿಂತನೆಯ ಮೊರೆ ಹೋಗಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನಿಧ್ಯವಿತ್ತು ಎಂದು ಹೇಳಲಾಗಿದೆ. ಇದೀಗ ಗುಳಿಗ ಕೋಪಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳೇ ಹಣ ಸಂಗ್ರಹಿಸಿ ಗುಳಿಗ ದೈವದ ಪುನರ್ ಪ್ರತಿಷ್ಠೆ ಮಾಡಿದ್ದಾರೆ. ಸ್ಥಳಾಂತರ ಮಾಡಿದ್ದ ಅಶ್ವಥ ಮರದ ಬುಡದಲ್ಲೇ ಗುಳಿಗ ದೈವಕ್ಕೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಇದೀಗ ವೈದಿಕ ವಿಧಿ ವಿಧಾನಗಳು ಮೂಲಕ ಗುಳಿನ ಕಟ್ಟೆ ನಿರ್ಮಾಣ ಮಾಡಲಾಗಿದೆ. ಇನ್ನು ಕಟ್ಟಡ ನಿರ್ಮಾಣಗೊಂಡು ಒಂದು ವರ್ಷವಾದರೂ ಉದ್ಘಾಟನೆ ಆಗಿರಲಿಲ್ಲ. ಆದರೆ ಯಾವಾಗ ದೈವದ ಪ್ರತಿಷ್ಠೆ ಕಾರ್ಯ ನಡೆಯಿತು. ಆ ಬಳಿಕ 15 ದಿನದಲ್ಲೇ ಆ ಕಟ್ಟಡದ ಉದ್ಘಾಟನೆಯಾಗಿದೆ.
ಇದೀಗ ಐಸಿಯುಗೆ ಬರುವ ರೋಗಿಗಳ ಆರೋಗ್ಯದಲ್ಲೂ ಚೇತರಿಕೆ ಕಾಣುತ್ತಿದ್ದಾರೆ. ಇದೀಗ ಸರ್ಕಾರಿ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ಗುಳಿಗ ದೈವದ ಕಾರಣಿಕಕ್ಕೆ ತಲೆಬಾಗಿದ್ದಾರೆ ಎಂದು ವರದಿಯೊಂದು ಹೇಳಿದೆ.