ಬೈಕ್ ಜಾಥಾ,ಟೀ ಶಟ್೯ ಅನಾವರಣ
ಬಂಟ್ವಾಳ: ತುಳುನಾಡ ಜವನೆರ್ ಬೆಂಗಳೂರು (ರಿ.) ಇವರ “ಅಷ್ಟಮಿದ ಐಸಿರದ ಸಂಭ್ರಮೊಡು” ಕಾರ್ಯಕ್ರಮದ ಪ್ರಯುಕ್ತ ಶನಿವಾರ ಬೆಂಗಳೂರಿನ ಯಶವಂತಪುರದಿಂದ ವಿಜಯನಗರದವರೆಗೆ ನಡೆದ ಬೈಕ್ ಜಾಥಾದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭಾಗವಹಿಸಿದರು.
ಯಶವಂತಪುರದಲ್ಲಿ ರಾಣಿ ಅಬ್ಬಕ್ಕ ಪ್ರತಿಮೆಗೆ ಪುಷ್ಪಾರ್ಚಣೆ ನೆರವೇರಿಸಿ ಬೈಕ್ ಜಾಥಾ ಆರಂಭಿಸಿ ವಿಜಯನಗರದವರೆಗೆ ಬೈಕ್ ಜಾಥಾ ನಡೆಸಲಾಯಿತು. ಭಾನುವಾರ (ಸೆ.22) “ಅಸ್ಟೆಮಿದ ಐಸಿರದ ಸಂಭ್ರಮೊಡು” ಕಾರ್ಯಕ್ರಮಕ್ಕೆ ಆರಂಭಿಕ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್ ತುಳನಾಡ ಜವನೆರ್ ಬೆಂಗಳೂರು (ರಿ.) ಇವರ ಟಿ ಶರ್ಟ್ ನ್ನು ಅನಾವರಣಗೊಳಿಸಿದರು.