ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕ್ಕೆ೧,೦೨,೩೦,೮೦೭.೮೬ ರೂ.ನಿವ್ವಳ ಲಾಭ: ಮಲ್ಲಿಕಾ ಶೆಟ್ಟಿ
ಬಂಟ್ವಾಳ: ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಬಂಟ್ವಾಳ ಇದರ ೨೦೨೩-೨೦೨೪ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ನೂತನ ನಿವೇಶನದಲ್ಲಿ ಶನಿವಾರ ನಢಯಿತು.ಸಂಘದ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿಯವರು ಸಭಾಧ್ಯಕ್ಷತೆ ಮಾತನಾಡಿ,ಸಂಘವು ವರದಿ ಸಾಲಿನಲ್ಲಿ ೨೨೩.೨೬ ಕೋ.ರೂ. ವ್ಯವಹಾರ ನಡೆಸಲಾಗಿದ್ದು, ೧,೦೨,೩೦,೮೦೭.೮೬ ನಿವ್ವಳ ಲಾಭಗಳಿಸಿದೆ.ಇದೇವೇಳೆ ಸದಸ್ಯರಿಗೆ ಶೇ. ೯ ಡಿವಿಡೆಂಟನ್ನು ಘೋಷಿಸಿದರು.

ಸಂಘವು ವರದಿ ಸಾಲಿನಲ್ಲಿ ೪೦.೩೦ ಕೋ.ರೂ. ಠೇವಣಿ,೧.೬೫ಕೋ.ರೂ. ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ೩೬.೬೫ ಕೋ.ರೂ.ಸಾಲವನ್ನು ವಿತರಿಸಲಾಗಿದೆ ಎಂದರು.೪ ವರ್ಷದ ಅವಧಿಯಲ್ಲಿ ೨ ನೂತನ ಶಾಖೆಗಳು ಮತ್ತು ಕೇಂದ್ರ ಕಛೇರಿಗೆ ನೂತನ ನಿವೇಶನ ಖರೀದಿಸಿ, ಸುಸಜಿತ ಕಟ್ಟಡ ನಿರ್ಮಾಣವನ್ನು ಕೈಗೊಂಡಿದೆ. ಸದಸ್ಯರಿಗೆ ಸಂಘದ ಮೂಲಕ ವಿವಿಧ ಸೇವೆಗಳನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನ ಪಡೆಯುವಂತೆ ಕೋರಿದರು.

ಬಳಿಕ ತೋಟಗಾರಿಕ ಇಲಾಖೆ ಹಾಗೂ ಕೃಷಿ ಇಲಾಖೆ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಬೆಳೆ ಸಮೀಕ್ಷೆ, ಬೆಳೆ ವಿಮೆ ಹಾಗೂ ಇಲಾಖಾ ಸೌಲಭ್ಯಗಳ ಕುರಿತು ಬಂಟ್ವಾಳ ತೋಟಗಾರಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು.
ಸಂಘದ ಹಿರಿಯ ಸದಸ್ಯರಾದ ರಾಮಣ್ಣ ಪೂಜಾರಿ ಕಂಗಿತ್ಲು,ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಅಲ್ಬಟ್೯ ಡಿಸೋಜ ಗುತ್ತಾರ್, ರಾಘವನ್ ನಾಯರ್ ರಾಮಲ್‌ಕಟ್ಟೆ , ಭಾರತಿ ಚೌಟ ಅಮ್ಟಾಡಿ ವಾರ್ಷಿಕ ಮಹಾಸಭೆ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ಅವರು ವರದಿವಾಚಿಸಿ,ಲೆಕ್ಕಪತ್ರ ಮಂಡಿಸಿದರು.
ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಪ್ರಾನ್ಸಿಸ್ ಡೇಸಾ, ರೋಶನ್ ಆಲೆಕ್ಸಾಂಡರ್ ಲೋಬೊ , ಕು. ರೀಚಾ ಶೀಫಾಲಿ ಡಿ’ಸೋಜ , ರಶ್ಮಿತಾ ಭಂಡಾರಿ, ಅರ್ವಿನ್ ಡಿಸೋಜ, ಮನೋಜ್ ಕನಪಾಡಿ, ಕು. ಶರಣ್ಯ ಎನ್.ಟಿ ಇವರನ್ನು ಸನ್ಮಾನಿಸಾಲಯಿತಲ್ಲದೆ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ನಿರ್ದೇಶಕರಾದ ಪದ್ಮನಾಭ ರಾವ್. ನರಸಿಂಹ ಹೊಳ್ಳ, ತೋಮಸ್ ಸಲ್ಡಾನ, ಅನೀಲ್ ಪಿಂಟೊ, ಪೂರ್ಣಿಮಾ ಕೆಂಪುಗುಡ್ಡೆ, ಫ್ಲೋಸಿ ಡಿ’ಸೋಜ, ಪೂರ್ಣಿಮಾ ಬೆದ್ರಗುಡ್ಡೆ, ರಮೇಶ್, ಕಮಾಲಾಕ್ಷ, ಶಿವಪ್ರಸಾದ್ ಕನಪಾಡಿ ಉಪಸ್ತಿತರಿದ್ದರು. ನಲ್ಕೆಮಾರ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸಂಘದ ಸಿಬ್ಬಂದಿಗಳಾದ ರೇಣುಕಾ ರೈ, ಅಲ್ವಿನ್ ವೇಗಸ್, ದುರ್ಗಾಪ್ರಸಾದ್, ರಮ್ಯ ಸನ್ಮಾನಪತ್ರ ವಾಚಿಸಿದರು.
ಸಂಘದ ಉಪಾಧ್ಯಕ್ಷ ಅಲ್ವಿನ್ ವಿನಯ ಲೋಬೋ ಸ್ವಾಗತಿಸಿ, ನಿರ್ದೇಶಕ ಬಿ. ಸುರೇಶ್ ಭಂಡಾರಿ ಅರ್ಭಿ ವಂದಿಸಿದರು. ಲೊರೊಟ್ಟೋ ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.