ಚಲಿಸುತ್ತಿದ್ದ ರೈಲು ಹತ್ತು ಹೋಗಿ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ RPF ಸಿಬ್ಬಂದಿ

ಉಡುಪಿ: ರೈಲು ಹತ್ತು ಮುನ್ನ ಎಚ್ಚರ ಇರಬೇಕು. ಈ ಪ್ರಯಾಣಿಕರಿಗೆ ರೈಲು ಮೊದಲೇ ಹತ್ತು ಮತ್ತು ಇಳಿಯುವ ಅಭ್ಯಾಸ ಇದೆ. ಇದು ತಪ್ಪು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ನೋಡಿ. ಉಡುಪಿ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲು ಹತ್ತು ಹೋಗಿ ರೈಲು ಟ್ರಾಕ್ಗೆ ಬಿದ್ದಿರುವ ಘಟನೆ ನಡೆದಿದೆ. ಮಹಿಳೆಯು ಆಯತಪ್ಪಿ ಬಿದ್ದಿದ್ದಾರೆ, ತಕ್ಷಣ ರೈಲಿನ ಮಹಿಳಾ ಸಿಬ್ಬಂದಿ ರಕ್ಷಿಸಿದ್ದಾರೆ.
ಉಡುಪಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಈ ಅವಘಡ ನಡೆದಿದೆ. ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಆರ್ ಪಿ ಎಫ್ ಸಿಬ್ಬಂದಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮಹಿಳೆಯೂ ಮಂಗಳೂರು ಮಾಡ್ಗಾವ್ ಪ್ಯಾಸೆಂಜರ್ ರೈಲು ಹತ್ತು ವೇಳೆ ಆಯತಪ್ಪಿ ಬಿದ್ದಿದ್ದಾರೆ.
ಈ ವೇಳೆ ಸಮಯೋಚಿತ ಕಾರ್ಯಾಚರಣೆಯನ್ನು ಆರ್ ಪಿ ಎಫ್ ಸಿಬ್ಬಂದಿ ಅರ್ಪಣಾ ನಡೆಸಿದ್ದಾರೆ. ಅರ್ಪಣಾ ಅವರು ತಕ್ಷಣ ಆ ಮಹಿಳೆಯನ್ನು ರೈಲ್ವೆ ಟ್ರಾಕ್ನಿಂದ ಪಕ್ಕಕ್ಕೆ ಎಳೆದು ಪ್ರಾಣ ಉಳಿಸಿದ್ದಾರೆ. ಇದೀಗ ಈ ಕಾರ್ಯಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.