ಉಡುಪಿ: ಬಿಸಿಲಿನ ಝಳ ತಾಳಲಾರದೇ ವಿದೇಶದಲ್ಲಿ ಮೃತಪಟ್ಟ ಕರಾವಳಿಯ ಯುವಕ

ಯು.ಎ.ಇ.ಯಲ್ಲಿ ಬಿಸಿಲಿನ ಝಳ ತಾಳಲಾರದೆ ಕುಂದಾಪುರದ ಯುವಕವು ಸಾವನ್ನಪ್ಪಿದ ಘಟನೆಯು ನಡೆದಿದೆ. ಮೃತಪಟ್ಟವರನ್ನು ವಿಠಲವಾಡಿ ನಿವಾಸಿ ಯುವಕ ಶಾನ್ ಡಿ’ಸೋಜಾ (19) ಎಂದು ಗುರುತಿಸಲಾಗಿದೆ.
ಶಾನ್ ಡಿ’ಸೋಜಾ ಅವರು ಯು.ಎ.ಇ. ಸೈಂಟ್ ಮೆರೀಸ್ ಚರ್ಚ್ ಬಳಿ ಮನೆಯಲ್ಲಿ ವಾಸವಾಗಿದ್ದು, ಖಾಸಗಿ ಕಂಪೆನಿಯಲ್ಲಿ ಮ್ಯಾನೆಜರ್ ಆಗಿದ್ದ ಶಾನ್, ಅಲ್ಲಿಯೇ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದನು.
ದುಬಾೖಯಿಂದ ಸುಮಾರು 115 ಕಿ.ಮೀ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ ಬಿಸಿಲಿನ ತಾಪವನ್ನು ತಾಳಲಾರದೆ, ಆರ್‌ಎಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದು, ತಂದೆ ತಾಯಿ ಸೇರಿದಂತೆ ಇಬ್ಬರು ಸಹೋದರರನ್ನು ಅಗಲಿದ್ದಾರೆ.