ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿಸಂಘ ನಿಯಮಿತದ ಮಹಾಸಭೆ: 47,91,165-49 ರೂ.ಲಾಭ
ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.ಸಂಘದ ಅಧ್ಯಕ್ಷ ಪದ್ಮನಾಭ ದೇವಾಡಿಗ ಬಂಟ್ವಾಳ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,2023-24 ನೇ ಸಾಲಿನಲ್ಲಿ ಸಂಘವು ಒಟ್ಟು 222 ಕೋ.ರೂ.ವ್ಯವಹಾರ ನಡೆಸಿ 47,91165-49 ರೂ.ಲಾಭ ಗಳಿಸಿದೆ,ಸದಸ್ಯರಿಗೆ ಶೇ.5.5 ಡಿವಿಡೆಂಟನ್ನು ಈ ಸಂದರ್ಭ ಘೋಷಿಸಿದರು.

ಸಂಘವು 2024 ರ ಮಾ.31 ಕ್ಕೆ 38.03 ,ಕೋ.ರೂ.ಠೇವಣಿ,31,76,9720 -00 ರೂ.ಪಾಲುಬಂಡವಾಳವನ್ನು ಹೊಂದಿರುತ್ತದೆ.ಪ್ರಸಕ್ತ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ವರ್ಗೀಕರಣ ಪಡೆದಿರುತ್ತದೆ ಎಂದರು.
2023-24 ರ ಸಾಲಿನಲ್ಲಿ 166084-00 ವ್ಯಾಪರ ಲಾಭ ಬಂದಿದ್ದು,36.16 ಕೋ.ರೂ.ಸಾಲವನ್ನು ನೀಡಿದ್ದು,32.88 ಕೋ.ರೂ.ಸದಸ್ಯರಿಂದ ಸಾಲ ಬರಬೇಕಾಗಿದೆ.
ಮುಂದಿನದಿನಗಳಲ್ಲಿ ಕೃಷಿ ಸಾಲದ ಜೊತೆಗೆ ಕೃಷೀಯೇತರ ಸಾಲ ವಿತರಿಸಲು ಮಹತ್ವ ನೀಡುವುದು,ಶೇ.100 ಸಾಲ ವಸೂಲಾತಿಗೆ ಕ್ರಮಕೈಗೊಳ್ಳುವುದು,ರೈತರ ಆರೋಗ್ಯ ರಕ್ಷಣಾ ಯೋಜನೆ,ಹವಾಮಾನ ಆಧಾರಿತ ಬೆಳೆ ವಿಮೆ,ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಗಳಿಗೆ ಸದಸ್ಯರನ್ನು ನೋಂದಾಯಿಸುವುದು ಸೇರಿದಂತೆ ಸಾಮಾನ್ಯ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸೇವೆಗಳನ್ನು ಸೇರಿಸಿಕೊಳ್ಳವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಇದೇವೇಳೆ ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ,ಪಿ.ಯು.ಸಿ,ಹಾಗೂ ಪದವಿಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಭವಾನಿಶಂಕರ ರಾವ್,ನಿರ್ದೇಶಕರಾದ ಎಂ.ಮಹಾಬಲ ಶೆಟ್ಟಿ, ವಿಠಲಪೂಜಾರಿ ಪುಂಡಿಬೈಲು,ರಾಮಚಂದ್ರಗೌಡ, ಎಂ.ಕರುಣೇಂದ್ರ,ಬಿ.ಸದಾಶಿವ ಶೆಣೈ,ಮನೋಹರ್,ಕೆ.ಎನ್.ಶೇಖರ್, ಹರೀಶ್ ,ಕೆ.ಪ್ರಕಾಶ್ ,ಲಕ್ಷ್ಮೀ ವಿ.ಪ್ರಭು ವೇದಿಕೆಯಲ್ಲಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಗತವರ್ಷದ ವರದಿವಾಚಿಸಿ,ಲೆಕ್ಕಪತ್ರ ಮಂಡಿಸಿದರು.