BIG BREAKING: ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳು ಬಂದ್, ಜಿಲ್ಲಾಧಿಕಾರಿ ಮಹತ್ವದ ಆದೇಶ
ಬಂಟ್ವಾಳ: ಬಿ.ಸಿ ರೋಡ್ ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮಹತ್ವ ಆದೇಶವನ್ನು ನೀಡಿದ್ದಾರೆ ಮುಂಜಾಗ್ರತಾ ಕ್ರಮವಾಗಿ ಮದ್ಯದಂಗಡಿ ಬಂದ್ ಮಾಡಿ ಆದೇಶ ನೀಡಿದ್ದಾರೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳು ಬಂದ್ ಮಾಡಲಾಗುತ್ತದೆ. ಮುಂದಿನ 48 ಗಂಟೆಗಳ ಅವಧಿಯವರೆಗೆ ಬಂದ್ ಮಾಡುವ ಬಗ್ಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಆದೇಶ ನೀಡಿದ್ದಾರೆ.
ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿಗೆ ಬಂಟ್ವಾಳಕ್ಕೆ ಆಹ್ವಾನ ಕೊಟ್ಟ ಬಿಸಿ ರೋಡ್ಗೆ ಬರುವಂತೆ ಹೇಳಿದ್ದ ಮುಸ್ಲಿಂ ನಾಯಕರು ಸವಾಲು ಹಾಕಿದ್ದರು. ಇದರ ಬೆನ್ನಲ್ಲೆ ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿ ಕಾರ್ಯಕ್ರತರು ಬಿಸಿರೋಡಿಗೆ ಬಂದು ಬಿಸಿ ರೋಡ್ ಚಲೋ ಆರಂಭಿಸಿದ್ದರು. ಈ ನಡುವೆ ಮುಸ್ಲಿಂ ಯುವಕರು ಬೈಕ್ ರ್ಯಾಲಿ ನಡೆಸಿ ಹಿಂದೂ ಮುಖಂಡ ಕೆಂಗಣ್ಣೀಗೆ ಗುರಿಯಾಗಿದ್ದರು. ಕೆಲ ಹೊತ್ತು ಪೊಲೀಸರು ಮತ್ತು ಹಿಂದೂ ಮುಖಂಡರ ನಡುವೆ ಭಾರಿ ಜಟಪಟಿ ನಡೆಯಿತು.
ಪರಿಸ್ಥಿತಿ ಬಿಗಿಯಾಗುತ್ತಿದಂತೆ ಸೆಕ್ಷನ್ 144 ಹಾಕುವ ಬಗ್ಗೆಯೂ ಚಿಂತನೆ ನಡೆದಿತ್ತು. ಇದೀಗ ಈ ಘಟನೆಯ ಬಗ್ಗೆ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಜಿಲ್ಲಾಧಿಕಾರಿಗಳು ಬಂಟ್ವಾಳ ಪುರಸಭಾ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳು ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯನ ಸಹೋದರ ಹಸೈನಾರ್ನ್ನು ಬಂಟ್ವಾಳ ನಗರ ಪೊಲೀರು ವಶಕ್ಕೆ ಪಡೆದಿದ್ದಾರೆ. ಇಂದು ಬಿ.ಸಿ.ರೋಡ್ ಚಲೋಗೆ ಭಜರಂಗದಳ ಕರೆ ನೀಡಿತ್ತು. ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ಗೆ ಮುಸ್ಲಿಂ ಮುಖಂಡರ ಸವಾಲು ಹಿನ್ನೆಲೆ ಈ ಚಲೋಗೆ ಕರೆ ನೀಡಲಾಗಿತ್ತು. ಇಂದು ಈದ್ ಮಿಲಾದ್ ಹಿನ್ನೆಲೆ ಬಿ.ಸಿ.ರೋಡ್ ಚಲೋ ನಡೆಸಲಾಗುವುದು ಎಂದು ಹೇಳಲಾಗಿತ್ತು. ಫೇಸ್ಬುಕ್ನಲ್ಲಿ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಈ ಬಗ್ಗೆ ಪೋಸ್ಟ್ನ್ನು ಹಂಚಿಕೊಂಡಿದರು.