ಮುಸ್ಲಿಂ ಧ್ವಜ ಹಿಡಿದು ಬೈಕ್ ರ್ಯಾಲಿ ಆರಂಭಿಸಿದ ಮುಸ್ಲಿಂ ಯುವಕರು, ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು
ಬಂಟ್ವಾಳ: ದಕ್ಷಿಣ ಕನ್ನಡದಲ್ಲಿ ಮತ್ತೆ ಶಾಂತಿ ಕದಡಿದ್ದಾರೆ. ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿಗೆ ಬಂಟ್ವಾಳಕ್ಕೆ ಆಹ್ವಾನ ಕೊಟ್ಟ ಬಿಸಿ ರೋಡ್ಗೆ ಬರುವಂತೆ ಹೇಳಿದ್ದ ಮುಸ್ಲಿಂ ನಾಯಕರು ಸವಾಲು ಹಾಕಿದ್ದರು. ಇದರ ಬೆನ್ನಲ್ಲೆ ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿ ಕಾರ್ಯಕ್ರತರು ಬಿಸಿರೋಡಿಗೆ ಬಂದು ಬಿಸಿ ರೋಡ್ ಚಲೋ ಆರಂಭಿಸಿದ್ದಾರೆ. ಮತ್ತೊಂದು ಕಡೆ ಈದ್ ಮಿಲಾದ್ ಮೆರವಣಿಗೆ ಕೂಡ ಪ್ರಾರಂಭವಾಗಿದೆ. ಇದೀಗ ಈ ಬಗ್ಗೆ ಬಿ.ಸಿ.ರೋಡ್ ನಲ್ಲಿ ಮತ್ತೆ ಗಲಾಟೆ ಶುರುವಾಗಿದೆ. ಮುಸ್ಲಿಂ ಧ್ವಜ ಹಿಡಿದು ಬೈಕ್ ಕಾರಿನಲ್ಲಿ ಆಗಮಿಸಿದ ಮುಸ್ಲಿಂ ಯುವಕರು.
ಇದನ್ನು ನೋಡಿ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತೆ ರೊಚ್ಚಿಗೆದಿದ್ದಾರೆ. ಏಕಾ ಏಕಿ ಮುಸ್ಲಿಂ ಯುವಕರಿಂದ ಬೈಕ್ ರ್ಯಾಲಿ ಆರಂಭಿಸಿದ್ದಾರೆ. ಇದನ್ನೂ ನೋಡಿದ ಹಿಂದೂ ಕಾರ್ಯಕರ್ತರು ರಸ್ತೆಗೆ ನುಗ್ಗಿದ್ದಾರೆ. ಇನ್ನು ಬೈಕ್ ರ್ಯಾಲಿಗೆ ಅವಕಾಶ ನೀಡಿದಕ್ಕೆ ಹಿಂದೂ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾಕ್ಕೆ ಇಳಿದಿದ್ದಾರೆ.
ಕೆಲ ಹೊತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಇದೀಗ ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ. ರಸ್ತೆ ಮಧ್ಯೆ ಕುಳಿತು ಹಿಂದೂ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ನಾವು ಸಂಜೆವರೆಗೂ ಹೋಗಲ್ಲ, ಇಲ್ಲೇ ಇರುತ್ತೇವೆ. ನಮಗೂ ಮೆರವಣಿಗೆಗೆ ಅವಕಾಶ ಕೊಡಿ. ನಿಮ್ಮ ಮಾತು ಕೇಳಿ ಸುಮ್ಮನೆ ಇದ್ದೆವು. ಆದರೆ ಏಕಾ ಏಕಿ ರ್ಯಾಲಿ ಮಾಡಿದ್ದಾರೆ. ಈ ಜಾಗ ಬಿಟ್ಟು ಕದಲೋದಿಲ್ಲ ಎಂದು ಹಿಂದೂ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.