ಹಿಂದೂ ಮುಖಂಡರಿಗೆ ಬಂಟ್ವಾಳಕ್ಕೆ ಆಹ್ವಾನ ನೀಡಿದ ಇಬ್ಬರು ಮುಸ್ಲಿಂ ಮುಖಂಡರ ಬಂಧನ
ಬಂಟ್ವಾಳ: ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿಗೆ ಬಂಟ್ವಾಳಕ್ಕೆ ಆಹ್ವಾನ ಕೊಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಶರಣ್ ಪಂಪ್ ವೆಲ್ ಸೇರಿದಂತೆ ವಿ.ಎಚ್.ಪಿ ಗೆ ಬಂಟ್ವಾಳಕ್ಕೆ ಆಹ್ವಾನ ಕೊಟ್ಟ ಇಬ್ಬರು ಅಂದರ್ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಅಡಿಯೋ ಹರಿಬಿಟ್ಟಿದ್ದ ಮುಸ್ಲಿಂ ಮುಖಂಡರು ಈ ಪೊಲೀಸರ ಅತಿಥಿಗಳಾಗಿದ್ದಾರೆ.
ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯನ ಸಹೋದರ ಹಸೈನಾರ್ನ್ನು ಬಂಟ್ವಾಳ ನಗರ ಪೊಲೀರು ವಶಕ್ಕೆ ಪಡೆದಿದ್ದಾರೆ. ಇಂದು ಬಿ.ಸಿ.ರೋಡ್ ಚಲೋಗೆ ಭಜರಂಗದಳ ಕರೆ ನೀಡಿತ್ತು. ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ಗೆ ಮುಸ್ಲಿಂ ಮುಖಂಡರ ಸವಾಲು ಹಿನ್ನೆಲೆ ಈ ಚಲೋಗೆ ಕರೆ ನೀಡಲಾಗಿತ್ತು. ಇಂದು ಈದ್ ಮಿಲಾದ್ ಹಿನ್ನೆಲೆ ಬಿ.ಸಿ.ರೋಡ್ ಚಲೋ ನಡೆಸಲಾಗುವುದು ಎಂದು ಹೇಳಲಾಗಿತ್ತು. ಫೇಸ್ಬುಕ್ನಲ್ಲಿ ಭಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಈ ಬಗ್ಗೆ ಪೋಸ್ಟ್ನ್ನು ಹಂಚಿಕೊಂಡಿದರು.
ಬೆಳಿಗ್ಗೆ ಬಿ.ಸಿ.ರೋಡ್ಗೆ ಬರೋದಾಗಿ ಪುನೀತ್ ಸವಾಲು ಹಾಕಿದ್ದರು. ಜಿಹಾದಿಗಳೇ ನಿಮ್ಮ ಸವಾಲನ್ನು ಸ್ವೀಕರಿಸಿದ್ದೇವೆ, ನಾವು ಬರುತ್ತಿದ್ದೇವೆ’ ಎಂದು ಹಾಕಿದರು. ನಿಮಗೆ ತಾಕತ್ತು ಇದ್ದರೆ ತಡೆಯಿರಿ, ನೀನು ಹೇಳಿದ ಜಾಗಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ‘ಹಿಂದುತ್ವ ಮೇಲಾ ಅಥವಾ ಜಿಹಾದಿಗಳಾದ ನೀವು ಮೇಲಾ ಎಂದು ನೋಡೆ ಬಿಡುವ’ ಎಂದು ಸವಾಲು ಹಾಕಿದ್ದಾರೆ.