ವಿಶ್ವಕರ್ಮರ ಹೆಸರಿನಲ್ಲಿ ಸರಕಾರದಿಂದ ಯೋಜನೆ ಜಾರಿಗೆ ತಂದಿರುವುದು ಹೆಮ್ಮೆಯ ಸಂಗತಿ: ಶಾಸಕರಾಜೇಶ್ ನಾಯ್ಕ್
ಬಂಟ್ವಾಳ : ವಿಶ್ವಕರ್ಮರು ಕುಲಕಸುಬುಗಳ ಮೂಲಕ ಸಮಾಜಕ್ಕೆ ಬೆಳಕಾದವರು, ಸರ್ಕಾರವೂ ಕೂಡ ವಿಶ್ವಕರ್ಮರ ಹೆಸರಿನಲ್ಲಿ ದೊಡ್ಡ ಯೋಜನೆಯನ್ನೇ ಜಾರಿಗೆ ತಂದಿರುವುದು ವಿಶ್ವಕರ್ಮರಿಗೆ ಹೆಮ್ಮೆಯ ಸಂಗತಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಅವರು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದನಡೆದ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮಾಜಿ ಸಚಿವ ಬಿ.ರಮಾನಾಥ ರೈ ಯವರು ಮಾತನಾಡಿ, ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರವಾದುದು ಎಂದರು.
ಮಂಗಳೂರು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸನ್ನ ಆಚಾರ್ಯ ರವರು ಮಾತನಾಡಿ, ಕಲೆ,ಸಂಸ್ಕೃತಿ ಯ ಸೃಜನಶೀಲತೆ ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿದೆ ಎಂದರು.
ಸಂಘದ ಅಧ್ಯಕ್ಷ ರಾದ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಇಲಾಖೆಯ ಕಿರಿಯ ಇಂಜಿನಿಯರ್ ಕೃಷ್ಣ ಪತ್ತಾರ್ ,ಆನೆಗುಂದಿ ಮಹಾ ಸಂಸ್ಥಾನದ ಗುರು ಸೇವಾ ಪರಿಷತ್ ಬಂಟ್ವಾಳ ಘಟಕದಅಧ್ಯಕ್ಷ ಯುವರಾಜ ಆಚಾರ್ಯರು,ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಆಚಾರ್ಯ,
ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾರತ್ನಾಕರ ರೈಧಾರ್ಮಿಕ ಕಾರ್ಯದರ್ಶಿ ಕಳ್ಳಿಗೆ ನಾರಾಯಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ವತಿಯಿಂದ ಕಾಷ್ಠಶಿಲ್ಪಿ ಸಹೋದರರಾದ ಹರೀಶ್ ಆಚಾರ್ಯ ಹಾಗೂ ಕುಮಾರಸ್ವಾಮಿ ಶರ್ಮ ರವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಗೌರವಿಸಲಾಯಿತು.
ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ಆಚಾರ್ಯ ವಂದಿಸಿದರು. ಪದಾಧಿಕಾರಿಗಳಾದ ಜಯಪ್ರಕಾಶ ಆಚಾರ್ಯ, ಜಯಚಂದ್ರ ಆಚಾರ್ಯ, ಅಶೋಕ್‌ಆಚಾರ್ಯ ಸಹಕರಿಸಿದರು.