Published On: Sat, Sep 14th, 2024

ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಮಹಾಸಭೆ

ಬಂಟ್ವಾಳ :  ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಲ್ಲೊಂದಾದ ಬಂಟ್ಚಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ. (ಪಿಎಲ್ ಡಿ ಬ್ಯಾಂಕ್)ವಾರ್ಷಿಕ ಮಹಾಸಭೆಯು ಶನಿವಾರ
ಬಿ.ಸಿ.ರೋಡಿನ ಗೀತಾಂಜಲಿ‌ ಸಭಾಂಗಣದಲ್ಲಿ  ನಡೆಯಿತು.


ಬ್ಯಾಂಕಿನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,2020 ಫೆ.ತಿಂಗಳಲ್ಲಿ ನಮ್ಮ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿದಾಗ ನಷ್ಟದಲ್ಲಿದ್ದ ಬ್ಯಾಂಕ್ ಪ್ರಸ್ತುತ  ನಿರ್ದೇಶಕರು,ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಎಲ್ಲಾ ನಷ್ಟವನ್ನು ಭರಿಸಿ 2023-24ನೇ ಸಾಲಿನಲ್ಲಿ ಬ್ಯಾಂಕ್1.05 ಕೋ.ರೂ ಲಾಭವನ್ನು ಗಳಿಸಿದೆ ಎಂದರಲ್ಲದೆ ಸದಸ್ಯರಿಗೆ ಶೆ.11% ಡಿವಿಡೆಂಡ್‌ನ್ನು ಘೋಷಿಸಿದರು.


ಪ್ರಸ್ತುತ 11303 ಸದಸ್ಯರನ್ನು ಹೊಂದಿರುವ ಬ್ಯಾಂಕ್ ನಲ್ಲಿ ಒಟ್ಟು ಪಾಲು ಬಂಡವಾಳ 178.50 ಲಕ್ಷ ರೂ.,2024ರ ಮಾ. 31 ರ ಅಂತ್ಯಕ್ಕೆ 37.36 ಲಕ್ಷ ರೂ.ಕ್ಷೇಮ ನಿಧಿ, 146.66 ಲಕ್ಷ ರೂ.ಇತರ ನಿಧಿ ಹಾಗೂ 1974.96 ಲಕ್ಷ ರೂ. ಠೇವಣಿಯನ್ನು ಹೊಂದಿರುತ್ತದೆ ಎಂದು ಅವರು ವಿವರಿಸಿದರು.
2023-24 ನೇ ಸಾಲಿನಲ್ಲಿ 506.66 ಲ.ರೂ. ವಸೂಲಿ ತಗಾದೆ ಹೊಂದಿದ್ದು ಆ ಪೈಕಿ  476.26 ಲ.ರೂ. ವಸೂಲಿ ಮಾಡುವ ಮೂಲಕ ಶೇ. 94% ವಸೂಲಾತಿ ಸಾಧನೆ ಮಾಡಿದೆ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಭೂ ಬ್ಯಾಂಕ್ ಗಳ ಪೈಕಿ ಸಾಲ ವಸೂಲಾತಿಯಲ್ಲು ಬಂಟ್ವಾಳ ಭೂಬ್ಯಾಂಕ್ ಪ್ರಥಮ ಸ್ಥಾನದಲ್ಲಿದೆ ಎಂದರಲ್ಲದೆ 2024ರ ಮಾ.31ಕ್ಕೆ  ಸಂದಾಯವಾಗಬೇಕಿದ್ದ ಕ.ರಾ.ಸ.ಕೃ ಮತ್ತು ಗ್ರಾ.ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
ರಾಜ್ಯದ 183 ಪಿಎಲ್‌ಡಿ ಬ್ಯಾಂಕುಗಳಲ್ಲಿ ಲಾಭಗಳಿಸಿದ ಕೆಲವೇ ಪಿಎಲ್‌ಡಿ ಬ್ಯಾಂಕ್‌ಗಳ ಪೈಕಿ ಬಂಟ್ವಾಳ ಭೂ ಬ್ಯಾಂಕ್ ಕೂಡ ಒಂದಾಗಿದೆ.ಈ ಸಾಧನೆಗೆ ಸಹಕರಿಸಿದ ಬ್ಯಾಂಕಿನ ಎಲ್ಲಾ ರೈತ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುವುದು ಎಂದ ಅವರು 2024-25 ನೇ ಸಾಲಿನಲ್ಲಿ 15 ಕೋ.ರೂ.ಸಾಲ ಹಂಚಿಕೆಯ ಗುರಿ ಹೊಂದಿದ್ದು,ಇದನ್ನು ತಲುಪಲು ಪ್ರಯತ್ನಿಸ ಲಾಗುವುದು. ಬ್ಯಾಂಕಿನ  ಮಾಣಿ ಶಾಖೆಯಲ್ಲಿ  ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದು ಅಧ್ಯಕ್ಷ ಅರುಣ್ ರೋಶನ್ ಡಿಸೋಜ ವಿವರಿಸಿದರು.
ನಿರ್ದೇಶಕರುಗಳಾದ ಲಿಂಗಪ್ಪ ಪೂಜಾರಿ, ವಿಜಯಾನಂದ, ಸುಂದರ ಪೂಜಾರಿ, ಲೋಲಾಕ್ಷಿ, ಲತಾ,ಚಂದ್ರಹಾಸ ಕರ್ಕೇರ, ಕೆ.ಸಂಜೀವ ಪೂಜಾರಿ ಬೊಳ್ಳಾಯಿ,ಹೊನ್ನಪ್ಪ ನಾಯ್ಕ್
ವೇದಿಕೆಯಲ್ಲಿದ್ದರು.ಇದೇ ವೇಳೆ ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಸಿಬ್ಬಂದಿ ಕಸ್ತೂರಿ ಅವರನ್ನು‌ ಸನ್ಮಾನಿಸಿ ಬೀಳ್ಕೋಡಲಾಯಿತು.
ಬ್ಯಾಂಕಿನ ಉಪಾಧ್ಯಕ್ಷರಾದ ಚಂದ್ರಶೇಖರ ಬಂಗೇರ  ಸ್ವಾಗತಿಸಿದರು.
ಬ್ಯಾಂಕಿನ ವ್ಯವಸ್ಥಾಪಕರಾದ ಪದ್ಮನಾಭ ಜಿ. ಅವರು ಗತವರ್ಷದ ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿದರು.ನಿರ್ದೇಶಕ ರಾಜೇಶ್ ಕುಮಾರ್ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter