ದೈವ,ದೇವರು ಹಾಗೂ ಹಿಂದೂ ಪ್ರಮುಖರ ಅವಹೇಳನ: ವಿ.ಹಿಂ.ಪ,ಬಜರಂಗದಳದಿಂದ ದೂರು ದಾಖಲು
ಬಂಟ್ವಾಳ: ದೈವ,ದೇವರುಗಳ ಹಾಗೂ ಹಿಂದೂ ಪ್ರಮುಖರ ಚಿತ್ರವನ್ನು ವ್ಯಂಗ್ಯವಾಗಿ ಚಿತ್ರೀಕರಿಸಿ ಅಸಹ್ಯ ಹಾಡುಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವವರ ವಿರುದ್ದ ವಿಶ್ವ ಹಿಂದೂ ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.
ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ, ಬಜರಂಗದಳ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್ ಅವರ ನೇತೃತ್ವದ ನಿಯೋಗ ಶನಿವಾರ ಬಂಟ್ವಾಳ ನಗರ ಠಾಣೆಯ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಅವರಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ , ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಲ, ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ, ಸಂದೇಶ್ ಕಾಡಬೆಟ್ಟು, ಪ್ರಶಾಂತ್ ಕೊಟ್ಟಾರಿ ಪೂಪಾಡಿಕಟ್ಟೆ, ಸಾಗರ್ ಕೊಯಿಲ, ತಿಲಕ್ ಕಿಣಿ ಬಂಟ್ವಾಳ, ರಂಜಿತ್ ಕುಮ್ಡೇಲ್, ದೇವರಾಜ್ ಕುಮ್ಡೇಲ್ ಮತ್ತಿತರು ಉಪಸ್ಥಿತರಿದ್ದರು.