ಸಮಗ್ರ ಪ್ರಶಸ್ತಿ ಪಡೆದ ಕಡೇಶಿವಾಲಯ ದ ಕ ಜಿ ಪ ಹಿ ಪ್ರಾ ಶಾಲೆ
ಬಂಟ್ವಾಳ: ಕಡೇಶಿವಾಲಯ ದ ಕ ಜಿ ಪ ಹಿ ಪ್ರಾ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024 ರ ಸ್ಪರ್ಧೆಯಲ್ಲಿ ಕಡೇಶಿವಾಲಯ ದ.ಕ.ಜಿ.ಪ.ಹಿ.ಪ್ರಾ. ಶಾಲೆಯು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಯಶಿಕ ಕನ್ನಡ ಕಂಠಪಾಠ ಪ್ರಥಮ, ನಿಧಿ ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆ ಪ್ರಥಮ, ಮನ್ವಿತ್ ಕೆ ಛದ್ಮ ವೇಶ ಪ್ರಥಮ, ಆರಾಧ್ಯ ಜಿ ಕಥೆ ಹೇಳುವುದು ಪ್ರಥಮ ಅಭಿನಯ ಗೀತೆ ದ್ವಿತೀಯ , ಆಶ್ರಯ್ ಬಿ ಎಸ್ ಚಿತ್ರಕಲೆ ಪ್ರಥಮ ಸಂಸ್ಕೃತ ಪಠಣ ದ್ವಿತೀಯ , ರಶ್ಮಿ ಕಥೆ ಹೇಳುವುದು ಮತ್ತು ಅಭಿನಯ ಗೀತೆ ಪ್ರಥಮ, ಪೂರ್ಣೇಶ್ ಹಿಂದಿ ಕಂಠಪಾಠ ಪ್ರಥಮ, ತನಿಷ್ಕಾ ಪಿ ಎಸ್ ಮಿಮಿಕ್ರಿ ಪ್ರಥಮ ಆಶುಭಾಷಣ ದ್ವಿತೀಯ, ತನ್ಮಯ್ ಕನ್ನಡ ಕಂಠಪಾಠ ದ್ವಿತೀಯ, ದಿವ್ಯಶ್ರೀ ಸಂಸ್ಕೃತ ಪಠಣ ದ್ವಿತೀಯ, ಮೋಕ್ಷಿತ ಎನ್ಪ್ರಬಂಧ ದ್ವಿತೀಯ, ಗುರುರಾಜ್ ಚಿತ್ರಕಲೆ ದ್ವಿತೀಯ, ಫಾತಿಮತ್ ಸಹದಿಯ ಇಂಗ್ಲಿಷ್ ಕಂಠಪಾಠ ತೃತೀಯ, ಮೊಹಮ್ಮದ್ ಶಹಧತ್ ಅರೇಬಿಕ್ ಪಠಣ ತೃತೀಯ, ಶ್ರವಣ್ಯ ಎಸ್ ನಾಯ್ಕ ಆಶುಭಾಷಣ ತೃತೀಯ, ಧನ್ವಿತ್ ಭಕ್ತಿಗೀತೆ ತೃತೀಯ, ತನುಶ್ರೀ ಕವನವಾಚನ ತೃತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಪ್ರಶಸ್ತಿ ಪಡೆದ ಮಕ್ಕಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದಿಸಲಾಯಿತು