ಕಾರ್ಕಳ: ಗಾಂಜಾ ವ್ಯಾಪಾರ ಮಾಡುತ್ತಿದ್ದ ಇಬ್ಬರು ಕುಖ್ಯಾತ ಖದೀಮರನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರು ಬೋಂದೆಲ್ ಕೃಷ್ಣ ನಗರದ ನಿವಾಸಿ ಮುಹಮ್ಮದ್ ಹನೀಫ್(37) ಹಾಗೂ ಅಮೀರುದ್ದೀನ್ ಎಂದು ಹೆಸರಿಸಲಾಗಿದೆ.
ganja in
ಕಾಬೆಟ್ಟು ಮಂಜುನಾಥ ಪೈ ಕಾಲೇಜು ಮೈದಾನ ಬಳಿ ಆರೋಪಿಗಳಿಬ್ಬರು ಹೀರೋ ಮೇಸ್ಟ್ರೋ ಸ್ಕೂಟರಿನಲ್ಲಿ ವ್ಯವಹಾರದಲ್ಲಿ ಕುದುರಿಸುತ್ತಿದ್ದಾಗ ಪೊಲೀಸರು ಕಾಯರ್ಾಚರಣೆ ನಡೆಸಿ ಬಂಧಿಸಿದ್ದಾರೆ. ವಿದ್ಯಾಥರ್ಿಗಳನ್ನೇ ಕೇಂದ್ರೀಕರಿಸಿ ಗಾಂಜಾ ಮಾರಾಟವಾಗುತ್ತಿರುವ ಬಗ್ಗೆ ಹಲವಾರು ದೂರುಗಳು ಪೊಲೀಸ್ ಇಲಾಖೆಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಆರೋಪಿಗಳಿಂದ ಆರು ಸಾವಿರ ಮೌಲ್ಯದ 500 ಗ್ರಾಂ. ತೂಕದ ಗಾಂಜಾ ಸೊಪ್ಪು, 1,500 ರೂ. ನಗದು, ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *