ಪುತ್ತೂರು: ಲೈಂಗಿಕ ಕಿರುಕುಳ ಪ್ರಕರಣ; ಮಹಾಲಿಂಗೇಶ್ವರ ದೇವರ ಮೊರೆ ಹೋದ ಅರುಣ್ ಕುಮಾರ್ ಪುತ್ತಿಲ

ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಕುಮಾರ್ ಪುತ್ತಿಲ ಪರ ಬೆಂಬಲಿಗರು. ದೇವರ ಮೊರೆ ಹೋಗಿದ್ದಾರೆ. ಅದೇ ವೇಳೆ ಅದೇ ದೇವಾಲಯಕ್ಕೆ ಸಂತ್ರಸ್ತೆ ಕೂಡ ಬಂದಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ಕಡೆಯಿಂದ ಪ್ರಾರ್ಥನೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಿಂದ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ಕಡೆಯವರು ಭೇಟಿಯಾಗಿದ್ದಾರೆ. ನನಗೆ ಅನ್ಯಾಯ ಆಗಿದೆ, ನ್ಯಾಯಬೇಕೆಂದು ದೇವರ ಮೊರೆ ಹೋಗಿದ್ದೇನೆ ಎಂದು ಸಂತ್ರಸ್ತೆ. ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಹಾಲಿಂಗೇಶ್ವರ ದೇವರ ಮೂಲಕ ನನಗೆ ನ್ಯಾಯ ಸಿಗಲೆಂದು ಸಂತ್ರಸ್ತೆ ಸಂಕಲ್ಪ ಮಾಡಿದ್ದಾರೆ. ಅದಾದ ಬಳಿಕ ಪುತ್ತಿಲ ಪರ ಬೆಂಬಲಿಗರು ಪ್ರಾರ್ಥನೆ ಮಾಡಿದ್ದಾರೆ. ಇನ್ನು ಬಗ್ಗೆ ಮಾತನಾಡಿದ ಎಲ್ಲಾ ತನಿಖೆಗೆ ಹೈಕೋರ್ಟ್ ನಿಂದ ತಡೆ ತರಲಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪುತ್ತೂರಿನಲ್ಲಿ ಈ ಹಿಂದೆ ನಡೆದ ಎಲ್ಲಾ ಪ್ರಕರಣಗಳಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಶನಿಪೂಜೆ, ಅಕ್ಷತಾ ಕೊಲೆ ಪ್ರಕರಣ, ಸೌಮ್ಯ ಕೊಲೆ ಪ್ರಕರಣ ಹೀಗೆ ಹಲವು ಘಟನೆಗಳಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನನಗೆ ಉಳ್ಳಾಲ್ತಿ ಮತ್ತು ಮಹಾಲಿಂಗೇಶ್ವರ ದೇವರ ಮೇಲೆ ನಂಬಿಕೆ ಇದೆ. ಸತ್ಯಕ್ಕೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಭಾರತೀಯ ಜನತಾ ಪಾರ್ಟಿ ನನ್ನ ಹಿಂದೆ ನಿಂತಿದೆ. ನನ್ನ ಸಂಕಷ್ಟದ ದಿನದಲ್ಲಿ ನನಗೆ ಸಹಕರಿಸಿದ ಬಿಜೆಪಿ ಮುಖಂಡರಿಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊನೆಯ ಉಸಿರಿರುವವರೆಗೂ ಹಿಂದುತ್ವಕ್ಕಾಗಿ ಹೋರಾಡುತ್ತೇನೆ. ಭಾರತೀಯ ಜನತಾ ಪಕ್ಷವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಟಗೊಳಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.