ಸಾಲ ವಾಪಸ್ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿಗೆ ಗನ್ತೋರಿಸಿ ಬೆದರಿಕೆ ಹಾಕಿದ ಅಪ್ಪ-ಮಗ

ಪುತ್ತೂರು: ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿ ಸಾಲ ವಾಪಸ್ಸು ಕೇಳಲು ಹೋದಾಗ ಗನ್ ತೋರಿಸಿ ಬೆದರಿಕೆ ಹಾಕಿರುವ ಪುತ್ತೂರಿನಲ್ಲಿ ನಡೆದಿದೆ. ಬಲ್ನಾಡು ಉಜುರುಪಾದೆ ನಿವಾಸಿ ಕೃಷ್ಣ ಕಿಶೋರ್ ಹಾಗೂ ಅಖಿಲೇಶ್ ಬಳಿ ಸಾಲ ವಾಪಸು ಕೇಳಿದಕ್ಕೆ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಪೊಲೀಸ್ ದೂರು ನೀಡಲಾಗಿದೆ.
ಅಖಿಲೇಶ್ ಪತ್ನಿ ಕೀರ್ತಿ ಅಖಿಲೇಶ್ ಎಂಬುವವರು ಎಸ್.ಬಿ.ಐ ಬ್ಯಾಂಕ್ನಿಂದ 2 ಕೋಟಿ ರೂ. ಸಾಲ ಪಡೆದಿದ್ದಾರೆ. ಸಾಲ ಮರುಪಾವತಿಸದೆ ಸತ್ತಾಯಿಸುತ್ತಿದ್ದ ಕೀರ್ತಿ ಅಖಿಲೇಶ್ಗೆ ಬ್ಯಾಂಕ್ ಮ್ಯಾನೇಜರ್ ಚಿನ್ಮಯ ಹಲವು ಬಾರಿ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ. ಇದಕ್ಕೂ ಅವರು ಉತ್ತರ ನೀಡಿದ ಕಾರಣ ಬ್ಯಾಂಕ್ ಮ್ಯಾನೇಜರ್ ತನ್ನ ತಂಡದೊಂದಿಗೆ ಕೀರ್ತಿ ಅಖಿಲೇಶ್ ಮನೆಗೆ ಧಾವಿಸಿದ್ದಾರೆ.
ಬ್ಯಾಂಕ್ನವರು ಮನೆ ಬಂದ ಕಾರಣ ಆಕ್ರೋಶಗೊಂಡ ಕೀರ್ತಿ ಪತಿ ಅಖಿಲೇಶ್ ಹಾಗೂ ಆತನ ತಂದೆ ಕೃಷ್ಣ ಕಿಶೋರ್ ಗಲಾಟೆ ಮಾಡಿದ್ದಾರೆ. ಈ ವೇಳೆ ಕೃಷ್ಣ ಕಿಶೋರ್ ಮನೆಯಲ್ಲಿದ್ದ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.