ಕೈಕಂಬ ರೈತ ಉತ್ಪಾದಕರ ಕಂಪೆನಿ ಲಿ. ಪ್ರಥಮ ವರ್ಷದ ವಾರ್ಷಿಕ ಮಹಾಸಭೆ

ಕೈಕಂಬ :ರೈತ ಉತ್ಪಾದಕರ ಕಂಪೆನಿ ಲಿಮಿಟೆಡ್ ನ ಪ್ರಥಮ ವರ್ಷದ ವಾರ್ಷಿಕ ಮಹಾಸಭೆ ಸೆ. 10 ರಂದು ಮಂಗಳವಾರ ಗುರುಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಂಪೆನಿಯ ಸಲಹಾ ಸಮಿತಿಯ ಸಂಚಾಲಕರಾದ ಸಿಲ್ವೆಸ್ಟರ್ ಡಿಸೋಜ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ಇಕೋವಾ ಸಂಸ್ಥೆಯ ಸಂಯೋಜಕರಾದ ಶ್ರೀ ಎಸ್. ತಿಪ್ಪೇಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಯುಗೇಂದ್ರ ಮಾತನಾಡಿದರು.

ಬೆಂಗಳೂರು ಇಕೋವಾ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಡಿಕೇಶ್ ಹಾಗೂ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಫರ ಎಮ್ ಆಗಮಿಸಿದ್ದರು.

ಕಂಪೆನಿ ಅಧ್ಯಕ್ಷರಾದ ಲಾರೆನ್ಸ್ ನೋಬರ್ಟ್ ಸಿಕ್ವೇರಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೈಕಂಬ ರೈತ ಉತ್ಪಾದಕರ ಕಂಪೆನಿ ಪ್ರಾರಂಭಿಸಿಲು ನೀವೆಲ್ಲರೂ ಸಹಕಾರ ನೀಡಿದ್ದೀರಿ. ಹೀಗಾಗಿ ನಿಮ್ಮೆಲ್ಲರ ಹತ್ತು ಹದಿಮೂರು ವರ್ಷಗಳಿಂದ ಈ ರೈತ ಉತ್ಪಾದಕರ ಕಂಪೆನಿ ಮುನ್ನಡೆಸಿಕೊಂಡು ಬರುತ್ತಿದ್ದೇವೆ.


ಅದಲ್ಲದೇ ಸಿಬ್ಬಂದಿಗಳ ವರ್ಗಗಳ ಸಂಪೂರ್ಣ ಸಹಕಾರವಿದ್ದು ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮವನ್ನು ಸ್ವರ್ಣ .ಬಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುಣವತಿ .ಕೆ ನಿರೂಪಿಸಿ ಹಾಗೂ ಜಾನ್ ಫೆಲಿಕ್ಸ್ ಮೊರಾಸ್ ವಂದಿಸಿದರು.
