ಅಡ್ಡೂರು ಲೈನ್‌ಮ್ಯಾನ್‌ಮೋಹನ ದಂಪತಿಗಳಿಗೆ ಸನ್ಮಾನ
ಕೈಕಂಬ: ಅಡ್ಡೂರು ೩೮ ನೇ ವರ್ಷದ ಬೆನಕಮಂಠಪದಲ್ಲಿ ನಡೆದ ಅಡ್ಡೂರು ಚೌತಿ ಗಣೇಶೋತ್ಸವದಂದು ಮೆಸ್ಕಾಂ ಇಲಾಖೆಯಲ್ಲಿ ಸುಮಾರು 26 ವರ್ಷಗಳಿಂದ ಸೇವೆ ಸಲ್ಲಿಸಿದ ಅಡ್ಡೂರು ಲೈನ್‌ಮ್ಯಾನ್‌ಮೋಹನ ದಂಪತಿಗಳನ್ನು ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ತಾನದ ಅನುವಂಶಿಕ ಮೊಕ್ತೇಸರ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ ಶಾಲುಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಟೀಲು ಸಾಹಿತಿ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು, ಚಂದ್ರಹಾಸ ಶೆಟ್ಟಿ ನಾರ್ಲ, ಶ್ರೀ ಗುರುಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಎಂ,ಶ್ರೀ ಭಗವತಿ ದೇವಸ್ಥನ ಉಳ್ಳಾಲ ಮೊಕ್ತೇಸರ ರಾಘವ ಕೈಕಂಬ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಗುರುಪುರ ಜಯಲಕ್ಷ್ಮೀ ಸುಭಾಸ್ಚಂದ್ರ, ಕೆ.ಪಿ.ಸಿ.ಸಿಸದಸ್ಯ ಮೂಡಬಿದ್ರೆ ಚಂದ್ರಹಾಸ ಸನಿಲ್, ಬದ್ರುಲ್ ಹುದಾ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಎಂ.ಎ.ಅಹಮ್ಮದ್ ಬಾವ ಕಾಂಜಿಲಕೋಡಿ, ನಂದ್ಯ ಚಿದಾನಂದ ಗುರಿಕಾರ , ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ, ಲೋಕನಾಥ ಪೊನ್ನೆಲ, ಸುಭಾಸ್ ಚಂದ್ರ ಪೊನ್ನೆಲ ಅಶೋಕ್ ಗರಡಿ, ಪ್ರೇಮನಾಥ್ ನಂದ್ಯ, ಸುಕುಮಾರ ಪಲ್ಲನೆಲ, ಶಂಕರ ಪೂಜಾರಿ, ಭೋಜಸುವರ್ಣ ಪೊನ್ನೆಲ, ಆನಂದ ಕುಲಾಲ್ ರಾಯರಬೆಟ್ಟು, ಸುರೇಶ್ ಗರಡಿ ಮತ್ತಿತರರು ಇದ್ದರು.