Published On: Tue, Sep 10th, 2024

ಅಡ್ಡೂರು ಗಣೇಶೋತ್ಸವ: ಗಣಪತಿಗೂ ನಮ್ಮ ಜೀವನಕ್ಕೂ ಒಂದು ಉತ್ತಮ ಮೌಲ್ಯ ಇದೆ: ಸಾಹಿತಿ ವಿಜಯಲಕ್ಷ್ಮೀ ಕಟೀಲು

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅಡ್ಡೂರು ಚೌತಿ ಎಂದೇ ಪ್ರಸಿದ್ದಿ ಪಡೆದಿದೆ. ಸಭಾ ಕಾರ್ಯಕ್ರಮದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇಗುಲದ ಅನುವಂಶಿಕ ಹರಿನಾರಾಯಣ ದಾಸ ಅಸ್ರಣ್ಣ ಆಶೀರ್ವಚನ ನೀಡಿದರು.

ಧಾರ್ಮಿಕ ಉಪನ್ಯಾಸದಲ್ಲಿ ಶಿಕ್ಷಕಿ , ಸಾಹಿತಿ ವಿಜಯಲಕ್ಷ್ಮೀ ಕಟೀಲು ಅವರು ಗಣಪತಿಯ ದೇಹದ ಪ್ರತಿಯೊಂದು ಭಾಗಗಳು ಕೂಡ ನಮ್ಮ ಜೀವನವನ್ನು ಆಧಾರಿಸಿದೆ, ಆತನನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಇಂದಿಗೂ ನಮ್ಮ ತುಳುನಾಡಿನಲ್ಲಿ ಕಥೆಗಳಲ್ಲಿ ಒಂದಾದ ಬಾಮಕುಮಾರ ಕಥೆಯಲ್ಲಿ ಗಣಪತಿಯನ್ನು ಭಾರೀ ಸುಂದರವಾಗಿ ವರ್ಣಿಸಿದ್ದಾರೆ. ಇದನ್ನು ಜನಪದರ ಗಣಪತಿ ಎಂದು ಹೇಳಲಾಗುತ್ತದೆ. ಈ ಗಣಪತಿಗೂ ನಮ್ಮ ಜೀವನಕ್ಕೂ ಒಂದು ಉತ್ತಮ ಮೌಲ್ಯವನ್ನು ಈ ಕಥೆಗಳು ತಿಳಿಸುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್​​​​​​​ ಮಂಗಳೂರಿನ ಅಧ್ಯಕ್ಷ ಜಯಾನಂದ ಎಂ ಅವರು ಮಾತನಾಡಿ, ದೇಹ ಸಾಂಸ್ಕರ ಎಂದು ಹೆತ್ತವರಿಗೆ, ಗುರು ಹಿರಿಯರಿಗೆ, ರೋಗಿಗಳಿಗೆ, ಮನುಷ್ಯನಿಗೆ ನೀಡುವ ಗೌರವ ಎಂದು ಹೇಳುತ್ತಾರೆ. ಆತ್ಮ ಸಾಂಸ್ಕರ ಎಂದರೆ ಇಂದಿನ ಗಣೇಶನಿಗೆ ಪೂಜೆ, ಹೋಮ, ಹವನ, ಭಜನೆಯನ್ನು ಆತ್ಮ ಸಾಂಸ್ಕರ ಎಂದು ಹೇಳುತ್ತಾರೆ. ಇಲ್ಲಿ ಗಣಪತಿಗೆ ಬೆಳಗಿರುವ ದೀಪವನ್ನು ನೋಡಿದೆ. ಆ ದೀಪ ಹಲವು ಉದಾಹರಣೆಗಳನ್ನು ನೀಡುತ್ತದೆ. ಈ ದೀಪ ಹೋಗಿದೆ ಎಂದರೆ ಸ್ತಂಭ ಆಕಾರ, ಅದರ ಮಧ್ಯದಲ್ಲಿ ಪಾತ್ರೆ ಅದಕ್ಕೆ ಎಣ್ಣೆ, ಬತ್ತಿಯನ್ನು ಹಾಕಿರುತ್ತಾರೆ. ಆ ಬತ್ತಿಗೆ ಗೊತ್ತಾ ನಾನು ಉರಿದು ಸುಟ್ಟು ಹೋಗುತ್ತದೆ. ಆ ಪಾತ್ರೆಗೂ ಗೊತ್ತಾ ನಾನು ಬಿಸಿ ಆಗುತ್ತೇನೆ ಎಂದು ಆದರೂ ಕೊನೆಗೆ ಒಂದು ಪ್ರಕಾಶಮಾನವಾದ ಬೆಳಕು ನೀಡುತ್ತದೆ. ಈ ದೀಪದಂತೆ ನಮ್ಮ ಜೀವನ ಕೂಡ ನಮ್ಮ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಮುಂದೆ ಅದು ನಮ್ಮ ಜೀವನ ಬೆಳಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಉದ್ಯಮಿ ಚಂದ್ರಹಾಸ ಶೆಟ್ಟಿ ನಾರ್ಲ, ಉಳ್ಳಾಲದ ಶ್ರೀ ಭಗವತಿ ದೇವಸ್ಥಾನದ ಮೊಕ್ತೇಸರರು ರಾಘವ, ಗುರುಪುರ ಕಾಂಗ್ರೆಸ್​ ಮಹಿಳಾ ಬ್ಲಾಕ್​​​​ ಅಧ್ಯಕ್ಷೆ ಜಯಲಕ್ಷ್ಮೀ ಸುಭಾಸ್​​ ಚಂದ್ರ, ಕೆಪಿಸಿಸಿ ಸದಸ್ಯ ಚಂದ್ರಹಾಸ್ ಸಬಿಲ್, ಕಾಂಜಿಲಕೋಡಿ ಬದ್ರುಲ್​​​ ಹುದಾ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ ಎ ಅಹಮ್ಮದ್​​​​​​​​​​​ ಬಾವ, ಮೊಹನ್​ ಅಡ್ಡೂರು, ನಂದ್ಯ ಚಿದಾನಂದ ಗುರಿಕಾರ , ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ, ಲೋಕನಾಥ ಪೊನ್ನೆಲ, ಸುಭಾಸ್ ಚಂದ್ರ ಪೊನ್ನೆಲ ಅಶೋಕ್ ಗರಡಿ, ಪ್ರೇಮನಾಥ್ ನಂದ್ಯ, ಸುಕುಮಾರ ಪಲ್ಲನೆಲ, ಶಂಕರ ಪೂಜಾರಿ, ಭೋಜಸುವರ್ಣ ಪೊನ್ನೆಲ, ಆನಂದ ಕುಲಾಲ್ ರಾಯರಬೆಟ್ಟು, ಸುರೇಶ್ ಗರಡಿ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.

ಗೌರವಾರ್ಪಣೆ:

ಶ್ರೀ ಮುಖ್ಯ ಪ್ರಾಣ ದೇವಸ್ಥಾನದ ಗೌರವಾಧ್ಯಕ್ಷರಾದ ನೂಯಿ ಬಾಲಕೃಷ್ಣ ರಾವ್‌ ಅವರನ್ನು ಅವರಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

ಸನ್ಮಾನ:

ಮೋಹನ್‌ ಅಡ್ಡೂರು ಲೈನ್‌ ಮ್ಯಾನ್‌ ಮೆಸ್ಕಾಂ ಕೈಕಂಬ ಹಾಗೂ ಕರ್ನಾಟಕ ರಾಜ್ಯದಲ್ಲಿ ದ್ವಿತೀಯ ಪಿಯುಸಿಯಲ್ಲಿ 99% 4ನೇ ರ್ಯಾಂಕ್‌ ವಿಜೇತೆ ಕು.ಮಾನ್ಯ ಪೊಳಲಿ ಮತ್ತು 10ನೇ ತರಗತಿಯಲ್ಲಿ ಸಿಬಿಎಸ್ಸಿ94.6%ಪಡೆದಕು. ವೃಷಾ ಪಲ್ಲನೆಲ ಅಡ್ಡೂರು ಇವರನ್ನು ಸನ್ಮಾನಿಸಲಾಯಿತು.

ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

ಗಣಪತಿ ದೇವರಿಗೆ ವಿಶೇಷ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಊರಿನ ಭಜನ ಮಂಡಳಿಗಳಿಂದ ಭಜನೆ ಕಾರ್ಯಕ್ರಮ ಹಾಗೂ ಜಿಲ್ಲೆಯ ಸುಪ್ರಸಿದ್ಧಕಲಾವಿದರ ಕೂಡುವಿಕೆಯಲ್ಲಿ ಯಕ್ಷ-ಗಾನ-ನಾಟ್ಯ-ಹಾಸ್ಯ-ಅರ್ಥವೈಭವ ನಡೆಯಿತು. ಬಹಳ ವಿಜೃಂಭಣೆಯಿಂದ ಶೋಭಾಯಾತ್ರೆ ನಡೆದು ಪಲ್ಗುಣಿ ನದಿಯಲ್ಲಿ ಗಣಪತಿ ವಿಸರ್ಜಿಸಲಾಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter