ಸುದ್ದಿ9 ವರದಿ ಫಲಶುತ್ರಿ: ಕೊನೆಗೂ ಪೊಳಲಿ ಸೇತುವೆಗೆ ಬಂತು ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ
ಅಡ್ಡೂರು ಸೇತುವೆ ಸಮಸ್ಯೆಗೆ ಕೊನೆಗೂ ಮುಕ್ತಿ ಕಾಣುವ ಲಕ್ಷಣಗಳು ಕಾಣುತ್ತಿದೆ. ಸುದ್ದಿ9 ವರದಿಯ ಫಲಶುತ್ರಿಯಿಂದ ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ ಅಡ್ಡೂರು ಸೇತುವೆಗೆ ಬಂದಿದೆ. ಸುದ್ದಿ9 ಈ ಬಗ್ಗೆ ನಿರಂತರ ವರದಿಗಳನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು. ಸ್ಥಳೀಯ ಸುದ್ದಿ ಸಂಸ್ಥೆ ಮಾಡಿದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಇದೀಗ ಅಲ್ಲಿ ಸಾರ್ವಜನಿಕ ಸಮಸ್ಯೆ ಮುಕ್ತಿ ಸಿಗುವ ಸಾಧ್ಯಗಳು ಇದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಹಿರಿಯ ನಾಗರಿಕರು ಅಧಿಕಾರಿಗಳಿಗೆ ಧನ್ಯವಾದಗಳನ್ನು ಹಾಗೂ ಆ ಯಂತ್ರ ಒಳ್ಳೆಯ ವರದಿಯನ್ನು ನೀಡಲಿ ಎಂದು ಹೇಳಿದ್ದಾರೆ.
ಈ ಹಿಂದೆ ಈ ಸೇತುವೆಯಲ್ಲಿ ಘನ ವಾಹನಗಳು ಸಂಚಾರಿಸಿದಂತೆ ಜಿಲ್ಲಾಧಿಕಾರಿಗಳು ಏಕಾಏಕಿ ನಿರ್ಧಾರವನ್ನು ತೆಗೆದುಕೊಂಡು, ಜನರಿಗೆ ತುಂಬಾ ತೊಂದರೆ ಉಂಟಾಗಿತ್ತು. ಆನಂತರ ಅಧಿಕಾರಿಗಳಿಗೆ ಪ್ರತಿಭಟನೆ ಎಚ್ಚರಿಕೆ ನೀಡಿದ ನಂತರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಜತೆಗೆ ಮಾತನಾಡಿ, ಎರಡು ದಿನದ ನಂತರ ಈ ಸೇತುವೆಯನ್ನು ಪರಿಶೀಲನೆ ಮಾಡಲು ಯಂತ್ರ ಬರುತ್ತದೆ ಎಂದು ಹೇಳಿದರು. ಆದರೆ 2 ವಾರಗಳಾದರೂ ಈ ಮಿಷನ್ ಬಂದಿರಲಿಲ್ಲ. ಈ ಬಗ್ಗೆ ಸುದ್ದಿ9 ವರದಿಯನ್ನು ಕೂಡ ಮಾಡಿತ್ತು.
ಇದೀಗ ಸೇತುವೆ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಯಂತ್ರ ಬಂದಿದೆ. ಈಗಾಗಲೇ ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಅದು ನೀಡುವ ವರದಿಯ ಆಧಾರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಯಂತ್ರ ಬಂದ ಸಂದರ್ಭದಲ್ಲಿ ಸ್ಥಳದಲ್ಲಿ ಇಂಜಿನಿಯರ್ ಅಮರನಾಥ್ ಕೂಡ ಇದ್ದರು. ಯಂತ್ರ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಇದಕ್ಕೆ ಜನ ಒಂದು ವೇಳೆ ಸೇತುವೆ ದುರಸ್ಥಿತಿ ಮಾಡಬೇಕು ಎಂದಾದರೆ, ಅದಕ್ಕೆ ಪರ್ಯಾಯ ವ್ಯವಸ್ಥೆ ಏನು? ಜನರಿಗೆ, ಬಸ್ಗಳಿಗೆ ಓಡಾಡಲು ಬೇರೆ ವ್ಯವಸ್ಥೆ ಏನು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಖಂಡಿತ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.