ಪೊಳಲಿ : ಅಡ್ಡೂರು ಗಂದಾಡಿ ಸೋಮನಾಥೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಶಿಲಾನ್ಯಾಸ

ವೇದಮೂರ್ತಿ ಪೊಳಲಿ ಸುಭ್ರಮಣ್ಯ ತಂತ್ರಿಗಳ ಮಾರ್ಗದರ್ಶನದಲ್ಲಿ, ಪೊಳಲಿ ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ಭಟ್ ಸಹಕಾರದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್ ಅವರ ಉಪಸ್ಥಿತಿಯಲ್ಲಿ ಅಡ್ಡೂರು ಗಂದಾಡಿ ಸೋಮನಾಥೇಶ್ವರ ದೇವಸ್ಥಾನದ ನೂತನ ಗರ್ಭಗುಡಿಗೆ ಓಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶುಕ್ರವಾರ ಬೆಳಿಗ್ಗೆ ಕನ್ಯಾ ಲಗ್ನದಲ್ಲಿ ಶೀಲಾನ್ಯಾಸ ನೆರವೇರಿಸಿದರು.

ಈ ಶುಭ ಸಂದರ್ಭದಲ್ಲಿ ಮೂಡಬಿದ್ರಿ ಚೌಟರ ಅರಮನೆಯ ಕುಲದೀಪ್ ಚೌಟ, ಮಂಗಳೂರು ಉತ್ತರ ಶಾಸಕ ಡಾ, ವೈ ಭರತ್ ಶೆಟ್ಟಿ, ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಮ್ಮುoಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಪೊಳಲಿ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್, ಮಂಜುನಾಥ ಭಂಡಾರಿ ಶೆಡ್ಯೆ, ನಡುಮನೆ ಚಂದ್ರಶೇಖರ ಭಟ್, ನಾರಾಯಣ ಭಟ್ ಗಂದಾಡಿ, ಸುಬ್ಬಯ ಭಂಡಾರಿ,ರಾಜೇಶ್ ಕಾರಂತ ಧರ್ಮಸ್ಥಳ, ವಾಸುದೇವ ರಾವ್ ಪೊಳಲಿ, ಸುಜಿತ್ ಆಳ್ವ ಏತಮೊಗರು, ಪದ್ಮನಾಭ ಶೆಟ್ಟಿ ಪೊನ್ನೆಲ,ಚಂದ್ರಹಾಸ್ ಪಳ್ಳಿಪಾಡಿ, ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ನೂಯಿ ಬಾಲಕೃಷ್ಣ ರಾವ್, ಡಾ. ರಾಮ್ ಮೋಹನ್ ರಾವ್ ರಾಯೆರೆ ಬೆಟ್ಟು, ಚಿದಾನಂದ ಗುರಿಕಾರ ನಂದ್ಯ, ಸುಭಾಸ್ಚಂದ್ರ, ಜೀರ್ಣೋಧಾರ ಸಮಿತಿಯ ಅಧ್ಯಕ್ಷ ರವಿಶಂಕರ ರಾವ್ ನೂಯಿ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ಭಟ್ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಊರ ಹಾಗೂ ಪರವೂರ ಭಕ್ತರು ಉಪಸ್ಥಿತರಿದ್ದರು.