ಪೊಳಲಿ : ಶ್ರೀ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿಯ 9ನೇ ವರ್ಷದ ಅಖಂಡ ಭಜನಾ ಸಪ್ತಾಹದ ಮಹಾಸಭೆ

ಪೊಳಲಿ ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿಯ 9 ನೇ ವರ್ಷದ ಭಜನಾ ಮಂಗಳೋತ್ಸವ ಹಾಗೂ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಭಜನಾ ಸಪ್ತಾಹದ ಹಿನ್ನಲೆಯಲ್ಲಿ ಪೂರ್ವಭಾವಿ ಮಹಾಸಭೆಯನ್ನು ಕರೆಯಲಾಗಿದೆ.

ನವೆಂಬರ್ 31 ರಿಂದ ಡಿಸೆಂಬರ್ 7 ರವರೆಗೆ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ 7 ದಿನಗಳ ಅಖಂಡ ಭಜನಾ ಸಪ್ತಾಹವನ್ನು ನಡೆಸಲು ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ಸಲಹೆ ಸೂಚನೆಗಾಗಿ ಪೂರ್ವಭಾವಿ ಮಹಾಸಭೆಯನ್ನು ಕರೆಯಲಾಗಿದೆ. ಸೆಪ್ಟೆಂಬರ್ 8 ರ ಬೆಳಗ್ಗೆ 10 -30 ಕ್ಕೆ ಪೊಳಲಿ ಅಲೇಶ್ವರ ದೇವಸ್ಥಾನದಲ್ಲಿ ಮಹಾಸಭೆ ನಡೆಯಲಿದೆ ಎಂದು ತಿಳಿಸಲಾಗಿದೆ.