ಪೊಳಲಿ ಸೇತುವೆ ಬಿರುಕು: ಸಮಾಲೋಚನಾ ಸಭೆಯಲ್ಲಿ ಮಹತ್ವದ ನಿರ್ಧಾರ, 13 ಜನರ ಸಮಿತಿ ರಚನೆ
ಪೊಳಲಿ: ಅಡ್ಡೂರು ಸೇತುವೆ ಸಮಸ್ಯೆಗೆ ಕೊನೆಗೂ ಪರಿಹಾರ ಕಾಣುವ ಸಾಧ್ಯತೆಗಳು ಇದೆ. ಈಗಾಗಲೇ ಸೇತುವೆ ಸಾಮರ್ಥ್ಯ ಯಂತ್ರ ಪೊಳಲಿ ಸೇತುವೆ ಬಳಿ ಬಂದಿದ್ದು ಕಾರ್ಯಚರಣೆಯನ್ನು ನಡೆಸಿದೆ. ಇದರ ನಡುವೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಒಂದು ಸಮಾಲೋಚನೆ ಸಭೆಯನ್ನು ಆ ಊರಿನ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಇಂದು ಮಾಡಿದ್ದಾರೆ. ಇಲ್ಲಿ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಮುಂದಿನ ನಡೆ ಏನು ಎಂಬ ಬಗ್ಗೆ ಚರ್ಚೆಯಾಗಿದೆ.
ಅಡ್ಡೂರು ಸೇತುವೆ ಬಂದ್ನಿಂದ ಬಸ್ ಚಾಲಕರಿಗೆ, ಶಾಲಾ ಮಕ್ಕಳಿಗೆ, ಬಸ್ಗಳಿಗೆ, ತೊಂದರೆ ಆಗುತ್ತಿದೆ. ಈ ಬಗ್ಗೆ ಸರಿಯಾದ ಕ್ರಮವನ್ನು ಅಧಿಕಾರಿಗಳು ತೆಗೆದುಕೊಳ್ಳದಿದ್ದಾರೆ. ಮುಂದೆ ಪ್ರತಿಭಟನೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಇನ್ನು ಸ್ಥಳಕ್ಕೆ ಬಂದ ಯಂತ್ರ ಬಗ್ಗೆಯೂ ಮಾತುಕತೆ ನಡೆದಿದೆ. ಯಂತ್ರ ನೀಡಿದ ವರದಿಯ ನಂತರ ಯಾವ ಕ್ರಮವನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಸೇತುವೆ ದುರಸ್ಥಿತಿ ನಡೆದರೆ ಜನ ಹಾಗೂ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಬಗ್ಗೆ ಚರ್ಚೆ ಕೂಡ ಮಾಡಲಾಗಿದೆ.
ಪೊಳಲಿ -ಅಡ್ಡೂರು ಪಲ್ಗುಣಿ ಸೇತುವೆ ಹೋರಾಟ ಸಮಿತಿ
ಇನ್ನು ಈ ಸಮಾಲೋಚನ ಸಭೆಯಲ್ಲಿ ಸೇತುವೆ ಬಗ್ಗೆ ಪೊಳಲಿ -ಅಡ್ಡೂರು ಪಲ್ಗುಣಿ ಸೇತುವೆ ಹೋರಾಟ ಸಮಿತಿ ಎಂದು ಒಂದು ಸಮಿತಿಯನ್ನು ಕೂಡ ರಚನೆ ಮಾಡಲಾಗಿದೆ.
ಈ ಸಮಿತಿಯಲ್ಲಿ ಗೌರವ ಸಲಹಗಾರರಾಗಿ ಭಾಲಕೃಷ್ಣ ರಾವ್ ನೂಯಿ, ಅಧ್ಯಕ್ಷರಾಗಿ ವೆಂಕಟೇಶ್ ನಾವಡ, ಕಾರ್ಯದರ್ಶಿಯಾಗಿ ಚಂದ್ರಹಾಸ್ ಪಲ್ಲಿಪಾಡಿ, ಉಪಾಧ್ಯಕ್ಷರಾಗಿ ಜಯರಾಮ ಕೃಷ್ಣ, ಅಬೂಬಕ್ಕರ್ ಅಂಮುಂಜೆ, ಸಂದೀಪ್ ಕಮ್ಮಾಜೆ, ಚಂದ್ರಶೇಖರ ಭಂಡಾರಿ, ಶಶಿಕಿರಣ್, ಕೋಶಧಿಕಾರಿಯಾಗಿ ಕಿಶೋರ್ ಪಲ್ಲಿಪಾಡಿ, ಸಂಚಾಲಕರಾಗಿ ಚಂದ್ರಶೇಖರ ಶೆಟ್ಟಿ ಬಡಕಬೈಲ್ ಹಾಗೂ ಮಹಿಳಾ ಪ್ರಮುಖರಾಗಿ ಮಮತ ಬಡಗಬೆಳ್ಳೂರು, ಚಂದ್ರಾವತಿ ಪೊಳಲಿ, ವೀಣಾ ಆಚಾರ್ಯ ಕರಿಯಂಗಳ ನೇಮಕಾಗೊಂಡಿದ್ದಾರೆ.
ಇನ್ನು ಈ ಸಮಾಲೋಚನ ಸಭೆಯಲ್ಲಿ ವೆಂಕಟೇಶ್ ನಾವಡ, ನೂಯಿ ಬಾಲಕೃಷ್ಣ ರಾವ್, ಚಂದ್ರಹಾಸ ಪಲ್ಲಿಪಾಡಿ, ಕರಯಾಂಗಳ ಗ್ರಾ. ಪ. ಅಧ್ಯಕ್ಷ ರಾಧಾ ಲೋಕೇಶ್ ಬಡಗಬೆಳ್ಳು ರು ಗ್ರಾ. ಪ ಅಧ್ಯಕ್ಷೆ ರೂಪ ಶ್ರೀ ನಾರಾಯಣ ನಾಯ್ಕ್ ಅಮ್ಮುoಜೆ ಗ್ರಾ ಪ. ಉಪಾಧ್ಯಕ್ಷ ರಾಧಾಕ್ರಷ್ಣ ತಂತ್ರಿ, ಕರಿಯಂಗಳ ಗ್ರಾ ಪ ಉಪಾಧ್ಯಕ್ಷ ರಾಜು ಕೋಟ್ಯಾನ್ ಗರೋಡಿ, ನವದುರ್ಗ ಬಸು ಮಾಲಕ ಶಿವ ಪ್ರಸಾದ್ ಶೆಟ್ಟಿ, , ಶಶಿಕಿರಣ್ , ಅಡ್ವೆಕೇಟ್ ಚಂದ್ರಶೇಖರ ರಾವ್ ಉಪಸ್ಥಿತರಿದ್ದರು, ಹಾಗೂ ಕರಿಯಂಗಳ, ಬಡಗಬೆಳ್ಳೂರು, ಅಮ್ಮುಂಜೆ , ತೆಂಕಬೆಳಳೂರಿನ ನಾಗರಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಸುಬ್ರಾಯ ಕಾರಂತ ಸ್ವಾಗತಿಸಿ, ವಂದಿಸಿದರು.