ಮೂಡುಬಿದರೆ : ಜೈನ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ.10 ರಿಂದ ಜನವರಿ 26ರ ವರೆಗೆ 48 ದಿನಗಳ ಮಂಡಲಾರಾಧನೋತ್ಸವ ನಡೆಯಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದರು.
Moodbidri Jain Swamiji
ಜೈನ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆರಾಧನಾ ಉತ್ಸವದಲ್ಲಿ ಕಲಿಕುಂಡಲ ಆರಾಧನೆ, ಮೃತ್ಯುಂಜಯಾರಾಧನೆ, ವಜ್ರಪಂಜರಾಧನೆ, ಕರ್ಮದಹನ ಆರಾಧನೆ, ಭಕ್ತಮರಯಂತ್ರ ಆರಾಧನೆ, ಶಾಂತಿ ಮಂತ್ರ ಆರಾಧನೆ ನಡೆಯಲಿದೆ. ಜ.15 ರಿಂದ 22 ರವರೆಗೆ ಇದೇ ಮೊದಲ ಬಾರಿಗೆ ಇಂದ್ರಧ್ವಜ ವಿಧಾನ ನಡೆಯಲಿದ್ದು ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ವಿದ್ವಾಂಸರ ಗೋಷ್ಠಿ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸದಿಗಳ ಮೊಕ್ತೇಸರರಾದ ಆನಡ್ಕ ದಿನೇಶ್ ಕುಮಾರ್ ಪಟ್ನ ಶೆಟ್ಟಿ ಸುದೇಶ್ ಕುಮಾರ್, ಮುಖಂಡರುಗಳಾದ ಬಾಹುಬಲಿ ಪ್ರಸಾದ್, ಅಂಡಾರು ಗುಣಪಾಲ ಹೆಗ್ಡೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *