ಒಗ್ಗಟ್ಟಿನಲ್ಲಿ ಸಂಘಟನೆ ಮಾಡಿದಾಗ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ
ಬಂಟ್ವಾಳ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಹೆಸರಿನಲ್ಲಿ ಹಿಂದೂ ಯುವಕರು ಜಾತಿ, ಮತಗಳ ಭೇದವನ್ನು ಮರೆತು ಹಿಂದೂ ನಾವೆಲ್ಲಾ ಒಂದು ಎನ್ನುವ ಬಾವನೆಯಲ್ಲಿ ಸಮಾಜ ಕಟ್ಟುವಲ್ಲಿ ಇಂತಹ ಕಾರ್ಯಕ್ರಮಗಳು ಶಕ್ತಿ ಕೊಡುತ್ತವೆ. ದೇಶದ ಪ್ರಶ್ನೆ ಬಂದಾಗ ನಾವೆಲ್ಲರೂ ಜಾತಿ, ಮತ ವರ್ಗ ಭೇದವನ್ನೆಲ್ಲಾ ಬಿಟ್ಟು ದೇಶದ ಪರವಾಗಿ ನಿಲ್ಲುವ ಅನಿವಾರ್ಯತೆಯ ಕಾಲ ಘಟ್ಟದಲ್ಲಿದ್ದೇವೆ ಎಂದು ಉಡುಪಿ -ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ಪಟ್ಟರು.
ಭಾನುವಾರ ಬಂಟ್ವಾಳ ತಾಲೂಕು ಕೊಯಿಲ ಶ್ರೀ ಗುರುಗಣೇಶ್ ಭಜನಾ ಮಂಡಳಿ (ರಿ) ಇದರ
ಆಶ್ರಯದಲ್ಲಿ ಲ.ದೇವಪ್ಪಶೆಟ್ಟಿ ಕ್ರೀಡಾಂಗಣದಲ್ಲಿ 20 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ವಿವಿಧ ಸಂಘಟನೆಗಳ ಆಶ್ರಯದಲ್ಲಿ ಅಲ್ಲಲ್ಲಿ ಮೊಸರು ಕುಡಿಕೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖೇನ ಹಿಂದೂ ಸಮಾಜ ಒಂದಾಗಿ, ಒಗ್ಗಟ್ಟಿನಲ್ಲಿ ಸಂಘಟನೆ ಮಾಡಿದಾಗ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ ಎಂದರು.
ಸಂಸದರಾದ ಬಳಿಕ ಬಂಟ್ವಾಳ ತಾಲೂಕಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇವರನ್ನು ಭಜನಾ ಮಂಡಳಿಯ ವತಿಯಿಂದ ಅಭಿನಂದಿಸಲಾಯಿತು. ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ರಮಿತಾ ಸತೀಶ್ ಅವರನ್ನು ಸನ್ಮಾನಿಸಲಾಯಿತು,
ಸುಂದರ ಹೊಳ್ಳ ಸಜಂಕಬೆಟ್ಟು ಧ್ವಜಾರೋಹಣ ನೆರವೇರಿಸಿದರು.ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಕೊರಗಪ್ಪ ಪೂಜಾರಿ,ಜಿಲ್ಲಾ ಬಿಜೆಪಿ ವಕ್ತಾರರಾದ ಡೊಂಬಯ್ಯ ಬಿ ಅರಳ,ಸಿದ್ದಕಟ್ಟೆ ಮೂರ್ತೆದಾರರ ಸೇವಾ ಸಹಕಾರಿ ಸಂಘ ದ ಅಧ್ಯಕ್ಷರಾದ ಜಗದೀಶ್ ಕೊಯಿಲ, ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ಉದ್ಯಮಿಗಳಾದ ರಾಜೇಶ್ ಜೈನ್ ಪಡ್ರಾಯಿ , ರಾಜೇಶ್ ಗೋವಿಂದಬೆಟ್ಟು ನಿವೃತ್ತ ಮುಖ್ಯಶಿಕ್ಷಕರಾದ ವೇದಾನಂದ ಕಾರಂತ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗುಣವತಿ ನೀರಲ್ಕೆ, ಸದಸ್ಯರುಗಳಾದ ರವೀಂದ್ರ ಪೂಜಾರಿ ಬದನಡಿ, ದಿನೇಶ್ ಶೆಟ್ಟಿ ಮಡಂದೂರು, ಪುಷ್ಪಾವತಿ ಕೊಯಿಲ ಉಪಸ್ಥಿತರಿದ್ದರು.
ಭಜನಾ ಮಂಡಳಿ ಅಧ್ಯಕ್ಷ ಕೀರ್ತನ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ ಕೊಯಿಲ ವಂದಿಸಿದರು.ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.