ಕುಣಿದು ಭಜಿಸಿರೋ : ಭಾವ – ಗಾನ – ಕುಣಿತ – ಅಂತರ್ ಘಟಕ ಭಜನಾ ಸ್ಪರ್ಧೆ ಸಂಪನ್ನ
ಬಂಟ್ವಾಳ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ), ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಕಾರದೊಂದಿಗೆ ಕುಣಿದು ಭಜಿಸಿರೋ – ಭಾವ – ಗಾನ – ಕುಣಿತ- ಅಂತರ್ ಘಟಕ ಭಜನಾ ಸ್ಪರ್ಧೆ ಸಂಪನ್ನಗೊಂಡಿತುಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಲಿಂಬಿ
ಸಾಯಿಬಾಬಾ ಮಂದಿರದ ಮೊಕ್ತೇಸರರಾದ ವಿಶ್ವಾಸ್ ದಾಸ್ ಅವರು ಮಾತನಾಡಿ,ಯುವಶಕ್ತಿ ದೇಶದ ಪ್ರಬಲ ಶಕ್ತಿ ಈ ನಿಟ್ಟಿನಲ್ಲಿ ಯುವಜನತೆಯಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಪ್ರಜ್ಞೆ ಮೂಡಿಸುವಲ್ಲಿ ಯುವವಾಹಿನಿ ಸಂಸ್ಥೆಯ ಪಾತ್ರ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಮಾರ್ ಪೂಜಾರಿ,ಕೆ.ಜಾಹ್ನವಿ ಆರ್.ಪೂಜಾರಿ, ವಿಜಯಲಕ್ಷ್ಮಿ ಮಧುಕರ ಮಲ್ಲಿ ಶುಭ ಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್.ಕೆ.ಪೂಜಾರಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಧಾರ್ಮಿಕ ಕ್ಷೇತ್ರದ ಅನನ್ಯ ಸೇವೆಗಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಸೇವಾದಳದ ಸಂಸ್ಥೆಯನ್ನು ಅಭಿನಂದಿಸಲಾಯಿತು.
ಭಜನಾ ಸ್ಪರ್ಧೆಯ ತೀರ್ಪುಗಾರರಾದ ಶೋಭಾ ಐತಾಳ್, ವಿಜಯಲಕ್ಷ್ಮಿ ಕಟೀಲ್, ಸಚಿನ್ ಸುವರ್ಣರವರನ್ನು ಗೌರವಿಸಲಾಯಿತು.
“ಡೆನ್ನಾನ ಡೆನ್ನನ 2024” ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಅವರು ಬೆಳಗ್ಗೆ ಕುಣಿತ ಭಜನಾ ಸ್ಪರ್ಧೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶುಭಾ ರಾಜೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ವಿಜೇತ ಘಟಕಗಳ ಫಲಿತಾಂಶ ಪ್ರಕಟಿಸಿದರು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ಅಮಿತಾ ಗಣೇಶ್, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶಾಲಿನಿ ಯಶವಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಣಂಬೂರು ಕುಳಾಯಿ ಘಟಕ ಪ್ರಥಮ:
ಸ್ಪರ್ಧೆಯಲ್ಲಿ ಒಟ್ಟು 12 ಘಟಕಗಳು ಭಾಗವಹಿಸಿತ್ತು.ಪಣಂಬೂರು – ಕುಳಾಯಿ ಘಟಕ ಪ್ರಥಮ ಸ್ಥಾನ ಪಡೆದರೆ,
ಕೂಳೂರು ಘಟಕ ದ್ವಿತೀಯಹಾಗೂ
ಸುರತ್ಕಲ್ ಘಟಕ ತೃತೀಯ ಸ್ಥಾನ ಪಡೆಯಿತು.
ಕಾರ್ಕಳ ಘಟಕ ಉತ್ತಮ ಭಜಕ,ಮೂಲ್ಕಿ ಘಟಕ ಉತ್ತಮ ತಬಲವಾದ ಹಾಗೂ ಕೂಳೂರು ಘಟಕ ಉತ್ತಮ ಹಾರ್ಮೋನಿಯಂ ಬಹುಮಾನ ಪಡೆಯಿತು.
ಯುವವಾಹಿನಿ
ಕೇಂದ್ರ ಸಮಿತಿಯ ಕಲೆ ಹಾಗೂ ಸಾಹಿತ್ಯ ನಿರ್ದೇಶಕರಾದ ನಯನ ರಮೇಶ್
ಸ್ವಾಗತಿಸಿದರು.ಸಂಚಾಲಕರಾದ ರಶ್ಮಿ ಸಿ ಕರ್ಕೇರ ಪ್ರಸ್ತಾವನೆಗೈದರು.ಸಚಿನ್ ಅಂಬಾಗಿಲು ಹಾಗೂ ವಿದ್ಯಾ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ,ವಂದಿಸಿದರು.