ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳ ಪೂರ್ವಾಪರ ವಿಚಾರಿಸಲು ಮನವಿ
ಬಂಟ್ವಾಳ : ರಾಜ್ಯದ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಆಧಾರ್ ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯೇ ಬಾಂಗ್ಲಾ ಸೇರಿದಂತೆ ವಲಸಿಗರಿಗೆ ಹಾಗೂ ಹಲವಾರು ಮಂದಿಗೆ ನಕಲಿ ಜನ್ಮ ದಿನಾಂಕ ಸೃಷ್ಟಿಸಿ, ನಕಲಿ ವಿಳಾಸ ಬದಲಾವಣೆ ಮಾಡಿ ಕೊಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿರುವ ಆಧಾರ್ ಸೇವಾ ಕೇಂದ್ರಗಳ ಕಂಪ್ಯೂಟರ್ ಆಪರೇಟರ್ ಗಳ ವಿಚಾರಣೆಗೊಳಪಡಿಸುವಂತೆ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರ ಪ್ರಭು ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ ಲಿಖಿತ ಮನವಿ ಮಾಡಿದ್ದಾರೆ.
ಬಾಂಗ್ಲಾ ಸೇರಿದಂತೆ ವಲಸಿಗರಿಗೆ ಹಾಗೂ ಹಲವಾರು ಮಂದಿಗೆ ನಕಲಿ ಜನ್ಮ ದಿನಾಂಕ ಸೃಷ್ಟಿಸಿ, ನಕಲಿ ವಿಳಾಸ ಬದಲಾವಣೆ ಮಾಡಿ ನೀಡಲಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದ ತಕ್ಷಣ ಸಕಾಲದಲ್ಲಿ ಕಾರ್ಯಚರಣೆ ಮಾಡಿರುವ ಆಧಾರ್ ಲಿಂಕ್ ನ ವಲಯ ಅಧಿಕಾರಿಗಳ ಕಾರ್ಯ ಪ್ರವೃತ್ತತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತ ವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ,
ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಛೇರಿಗಳಲ್ಲಿನ ಆಧಾರ್ ಸೇವಾ ಕೇಂದ್ರ ಮತ್ತು ಗ್ರಾಮ ವನ್ ಸೇವಾ ಕೇಂದ್ರ ಸಂಬಂಧಿಸಿದ ಕಂಪ್ಯೂಟರ್ ಆಪರೇಟರ್ ಗಳಲ್ಲಿ ನಡೆಯತ್ತಿರಬಹುದಾದ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಛೇರಿಗಳಲ್ಲಿನ, ಆಧಾರ್ ಸೇವಾ ಕೇಂದ್ರಗಳ ಕಂಪ್ಯೂಟರ್ ಆಪರೇಟರ್ ಗಳ ಹಾಗೂ ಗ್ರಾಮ ಒನ್ ಸೇವಾ ಕೇಂದ್ರ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿನ ಕಂಪ್ಯೂಟರ್ ಆಪರೇಟರ್ ಗಳ ಪೂರ್ವಾಪರ ವಿಚಾರಣೆಯ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.