ಬಂಟ್ವಾಳ: ಕುಲಾಲ ಸೇವಾದಳದಿಂದ ‘ಅನ್ನದಾತ ಸುಖಿನೋಭವಂತುಃ’ ಕಾರ್ಯಕ್ರಮ
ಬಿ.ಸಿ.ರೋಡ್ : ಕುಂಬಾರ ಸಮುದಾಯ ಕಟ್ಟಿಕೊಂಡ ಕುಲಾಲ ಸಂಘಟನೆಯಲ್ಲಿ ಕುಲಾಲ ಸೇವಾದಳದ ಅಭೂತ ಪಾತ್ರವನ್ನು ವಹಿಸಿದೆ. ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಂಘಟನೆ ಯಕ್ಷಗಾನ ಕಲಾವಿದರು, ರಂಗಕಲಾವಿದರು, ಯೋಧರನ್ನು ವಿವಿಧ ಗೌರವ ಸಲ್ಲಿಸುವ ಕೆಲಸಗಳನ್ನು ಮಾಡಲಾಗಿತ್ತು. ಹಾಗೆಯೇ ಈ ಕಾರ್ಯಕ್ರಮಗಳಲ್ಲಿ ರುಚಿಯಾದ ಆಹಾರ ಖಾದ್ಯಗಳನ್ನು ಮಾಡಿಕೊಡುವ ಬಂಟ್ವಾಳ ತಾಲೂಕಿನಲ್ಲಿ ಕ್ಯಾಟರಿಂಗ್, ಹೊಟೇಲ್ ಮತ್ತು ಕ್ಯಾಂಟೀನ್ ಉದ್ಯಮಿಗಳನ್ನು ಒಂದು ಗೂಡಿಸಿದ್ದು ಮುಂದೆಯೂ ಹೀಗೆಯೇ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗಲಿ ಎಂದು ಉದ್ಯಮಿ ನಾರಾಯಣ ಸಿ. ಪೆರ್ನೆ ತಿಳಿಸಿದರು.
ಅವರು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಭಾನುವಾರ ನಡೆದ ಕೃಷ್ಣ ಕೃಷ್ಣ ಶ್ರೀಕೃಷ್ಣ – ಸೀಸನ್ 2 ಕಾರ್ಯಕ್ರಮದ ಸಂದರ್ಭದಲ್ಲಿ ‘ಅನ್ನದಾತ ಸುಖಿನೋಭವಂತುಃ’ ಹೊಟೇಲ್, ಕ್ಯಾಟರಿಂಗ್ ಮತ್ತು ಕ್ಯಾಂಟೀನ್ ಉದ್ಯಮಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಹೊಟೇಲ್ ಉದ್ಯಮಿ ಮೋಹನ್ ಕುಲಾಲ್, ವಗ್ಗ ಕೆಟರಿಂಗ್ ಉದ್ಯಮಿ ಸದಾಶಿವ ಬಂಗೇರ, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ, ನಿವೃತ್ತ ಯೋಧ ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು, ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಸಭಾಧ್ಯಕ್ಷತೆಯನ್ನು ಕೃಷ್ಣಪ್ಪ ಬಿ. ವಹಿಸಿದ್ದರು. ‘ಕೃಷ್ಣ ಕೃಷ್ಣ ಕೃಷ್ಣಾ – ಸೀಸನ್ 2’ ವಿವಿಧ ವಿಭಾಗಗಳಲ್ಲಿ ಕೃಷ್ಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಆವೆ ಮಣ್ಣಿನಲ್ಲಿ ಆಕೃತಿ ರಚನಾ ಸ್ಪರ್ಧೆಗಳು ನಡೆಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್ ಉಪನ್ಯಾಸ ನೀಡಿದರು. ಜಯಂತ್ ಅಗ್ರಬೈಲು, ತಾರನಾಥ ಮೊಡಂಕಾಪು, ಮಹೇಶ್ ಕುಲಾಲ್ ಕಡೇಶಿವಾಲಯ, ಕು| ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು. ಮಿಥ್ವಿ ಜಿ. ಮೂಲ್ಯ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಾಜೇಶ್ ಕುಮಾರ್ ರಾಯಿ ಅತಿಥಿಗಳನ್ನು ಸ್ವಾಗತಿಸಿ. ಪ್ರೇಮನಾಥ ನೇರಂಬೋಳು ಸ್ಪರ್ಧಾ ವಿಜೇತರ ವಿವರ ತಿಳಿಸಿದರು. ರೋಹಿತ್ ಮೊಡಂಕಾಪು ಧನ್ಯವಾದ ನೀಡಿದರು. ಚಂದ್ರಶೇಖರ ಕಾಮಾಜೆ, ರಾಘವೇಂದ್ರ ಕಾಮಾಜೆ, ರಾಜೇಶ್ ಭಂಡಾರಿಬೆಟ್ಟು, ದೇವದಾಸ ಅಗ್ರಬೈಲು, ದರ್ಶನ್ ಮೊಡಂಕಾಪು, ಕೃತಿಕ್ ಬಂಟ್ವಾಳ, ಗಣೇಶ್ ಮೊಡಂಕಾಪು, ವಿಜಿತ್ ಬಂಟ್ವಾಳ, ಯಾದವ ಅಗ್ರಬೈಲು, ಚಿರಾಗ್ ಕಾಮಾಜೆ ಕಾರ್ಯಕ್ರಮಕ್ಕೆ ಭಾಗವಹಿಸಿದರು.