ನೈಸರ್ಗಿಕ ಜಲದಲ್ಲಿ ಗಣೇಶನ ಮೂರ್ತಿಯ ವಿಸರ್ಜನೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಕೆ
ಬಂಟ್ವಾಳ:ಗಣೇಶೋತ್ಸವದ ಸಮಯದಲ್ಲಿ ಪರಿಸರ ಮಾಲಿನ್ಯದ ನೆಪದಲ್ಲಿ ಕೃತಕ ಟ್ಯಾಂಕ್ ಮತ್ತು ‘ಅರಸಿನ ಗಣಪತಿ’ ‘ಗೋಮಯ ಗಣಪತಿ ‘ಎಂಬಂತಹ ಧರ್ಮ ಬಾಹಿರ ನಡೆಸಿ ಗಣೇಶ ಮೂರ್ತಿಯ ಅಪಮಾನ ಮಾಡುವುದನ್ನು ನಿಲ್ಲಿಸುವಂತೆ ಹಾಗೂ ಅನಾಧಿಕಾಲದಿಂದ ನಡೆದು ಬಂದಂತಹ ರೂಢಿ, ಪರಂಪರೆಗನುಸಾರ ನೈಸರ್ಗಿಕ ಜಲದಲ್ಲಿ ಮೂರ್ತಿಯ ವಿಸರ್ಜನೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಿದೆ.
ಅದೇ ರೀತಿ ಜೇಡಿ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ತಯಾರಿಸಲು ಆಡಳಿತವು ಮೂರ್ತಿಕಾರರಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಜಿಪಮಾಗಣೆ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್ ,ಪ್ರಮುಖರಾದ ಅಜಿತ್ ಮೆಲ್ಕಾರ್, ಯೋಗೀಶ್ ಬಿ.ಸಿ.ರೋಡ್, ಜಯಕುಮಾರ್, ಸಂಕೇತ್, ನಾರಾಯಣ ಅಮೀನ್, ಜನಾರ್ಧನ ಬೆಂಜನಪದವು, ಪ್ರವೀಣ್ ಬೆಂಜನಪದವು, ಶ್ರೀ ಕೃಷ್ಣ ಕಾಂದಿಲಾ, ಸೋಮನಾಥ ಬಂಟ್ವಾಳ, ನಾಗೇಶ್, .ಗುಣಶ್ರೀ, ಪ್ರತಿಭಾ ಶೆಟ್ಟಿ, ಹರಿರಾಮ್ ಬೆಂಜನಪದವು, ವಸಂತ ಹಳೆ ಗೇಟು, ಉಪೇಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.