ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಇನ್ನೂ ಬಂದಿಲ್ಲ ಯಾಕೆ? ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕ ರಾಜೇಶ್ ನಾಯ್ಕ್

ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆ ಬಗ್ಗೆ ದಿನಕ್ಕೊಂದು ಗೊಂದಲ, ದೊಡ್ಡ ತಲೆನೋವು ಆಗಿದೆ. ಏಕಾಏಕಿಯಾಗಿ ಸೇತುವೆಯನ್ನು ಬಂದ್ ಮಾಡಿ ಜನರಿಗೆ ತೊಂದರೆ ಎಂದು ಜಿಲ್ಲಾಧಿಕಾರಿ ಮುಂದೆ ಹೋಗಿ ಮನವಿ ಮಾಡಿ ಎಲ್ಲವೂ ಆಯಿತು, ಜಿಲ್ಲಾಧಿಕಾರಿಗಳು ಕೂಡ ಒಂದು ಬಾರಿ ಬರುವೇ ಎಂದು ಹೇಳಿ ಕೈಕೊಟ್ಟು, ನಂತರ ಜನರ ಆಗ್ರಹಕ್ಕೆ ಮನಿದು, ಸ್ಥಳಕ್ಕೆ ಭೇಟಿ, ಪರಿಶೀಲನೆಯನ್ನು ಕೂಡ ಮಾಡಿ, ಇಂಜಿನಿಯರ್ ಜತೆಗೆ ಮಾತಕತೆ ನಡೆಸಿ, ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬರುತ್ತದೆ ಎಂದು ಹೇಳಿ ಜನರಿಗೆ ಭರವಸೆ ನೀಡಿ ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಮಿಷನ್ ಬಂದಿಲ್ಲ. ಇದೀಗ ಈ ಬಗ್ಗೆ ಶಾಸಕರು ರಾಜೇಶ್ ನಾಯ್ಕ್ PW ಅಧಿಕಾರಿಗಳನ್ನು ಫೋನ್ ಮಾಡಿ ಪ್ರಶ್ನೆಸಿದ್ದಾರೆ.
ಎರಡು ದಿನದ ಒಳಗೆ ಮಿಷನ್ ಬರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ. ಆದರೆ ಒಂದು ವಾರವಾದರೂ ಇನ್ನೂ ಬಂದಿಲ್ಲ, ಏನು ಕತೆ ಎಂದು ವಿಚಾರಿಸಿದ್ದಾರೆ. ಇದಕ್ಕೆ PW ಅಧಿಕಾರಿ ಅಮರನಾಥ್, ಸರ್ ಈಗಾಗಲೇ ಈ ಬಗ್ಗೆ ವಿಚಾರಣೆ ಮಾಡಲಾಗಿದೆ. ತಾಂತ್ರಿಕ ತೊಂದರೆಯಿಂದ ಬರಲು ಸಾಧ್ಯವಾಗಿಲ್ಲ. ಅದು ದೆಹಲಿಯಿಂದ ಬರಬೇಕಿದೆ ಹಾಗಾಗಿ ತಡವಾಗಿದೆ. ಬಂದ ತಕ್ಷಣ ಈ ಬಗ್ಗೆ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಇದಕ್ಕೆ ಶಾಸಕರು ತಕ್ಷಣ ಈ ಬಗ್ಗೆ ವಿಚಾರಿಸಿ, ಇಲ್ಲಿಗೆ ಮಿಷನ್ ಬರುವಂತೆ ನೋಡಿಕೊಳ್ಳಿ, ಅದಷ್ಟೂ ಬೇಗ ಮಿಷನ್ ಇಲ್ಲಿಗೆ ಬರಲಿ ಎಂದು ಶಾಸಕರು ಅಧಿಕಾರಿಗಳಿಗೆ ಹೇಳಿದ್ದಾರೆ.
ಶಾಸಕರು ಕೂಡ ಜನರ ಸಹಾಯಕ್ಕಾಗಿ ಒಂದು ಬಸ್ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆ.22 ಸ್ಥಳಕ್ಕೆ ಡಿಸಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯ ಜತೆಗೆ ಮಾತನಾಡಿದ್ದಾರೆ. ಸೋಮವಾರ ಅಥವಾ ಮಂಗಳವಾರ ಬ್ರಿಡ್ಜ್ ಸಾಮರ್ಥ್ಯ ಪರೀಕ್ಷಾ ಮಿಷನ್ ಬರುತ್ತದೆ. ಇನ್ನು ಮಂಗಳೂರಿನ ಕೆಲವೊಂದು ಸೇತುವೆಗಳ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ. ಇನ್ನು ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು.