Published On: Fri, Aug 30th, 2024

ಪೊಳಲಿ ಸೇತುವೆ: ಜಿಲ್ಲಾಧಿಕಾರಿಗಳೇ ನಿಮ್ಮ ಅಧಿಕಾರಿಗಳ ಉಡಾಫೆ ಕರ್ತವ್ಯವನ್ನು ಒಮ್ಮೆ ಇಲ್ಲಿ ನೋಡಿ

ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆ ಅಪಾಯದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಘನ ವಾಹನಗಳು ಅಲ್ಲಿ ಹೋಗಬಾರದು ಎಂದು ಆದೇಶವನ್ನು ನೀಡಿ. ಹೈಟ್​​​ ಲಿಮಿಟ್​​​​​​​​​ ಗೇಟ್​​​​ನ್ನು (ಎತ್ತರದ ನಿರ್ಬಂಧಕ) ಹಾಕಿದ್ದಾರೆ. ಇದರ ಜತೆಗೆ ಖಾಸಗಿ ಬಸ್​​​ಗಳು ಹೋಗಬಾರದು ಎಂದು ಕಟ್ಟುನಿಟ್ಟಾಗಿ ಆದೇಶವನ್ನು ನೀಡಿದ್ದಾರೆ. ಇದಕ್ಕೆ ಪೊಲೀಸ್​​ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ ಇಂದು (ಆ.30) ಘನ ವಾಹನವೊಂದು (ಲಾರಿ) ಈ ಸೇತುವೆಯಲ್ಲಿ ಹೋಗಿದೆ. ಇದರ ಪರಿಣಾಮ ಎತ್ತರದ ನಿರ್ಬಂಧಕ (ಹೈಟ್​​​ ಲಿಮಿಟ್​​​​​​​​​ ಗೇಟ್) ಬೆಂಡ್​​ ಆಗಿದೆ. ಈ ಬಗ್ಗೆ ಪೊಲೀಸ್​​​​​ ಸಿಬ್ಬಂದಿಯನ್ನು ಸುದ್ದಿ9 ಮೀಡಿಯದವರು ಪ್ರಶ್ನೆ ಮಾಡಿದ್ದಾರೆ, ಇದಕ್ಕೆ ಪೊಲೀಸ್​​​ ಸಿಬ್ಬಂದಿ ಉಡಾಫೆಯ ಉತ್ತರ ನೀಡಿದ್ದಾರೆ.

ಜಿಲ್ಲಾಧಿಕಾರಿ ಆದೇಶ ಇದ್ದರು, ಇಲ್ಲಿ ಘನ ವಾಹನವೊಂದು ಹೋಗಿದೆ ಎಂದರೆ, ಇದು ಅಧಿಕಾರಿಗಳ ನಿರ್ಲಕ್ಷ್ಯ ಅಲ್ಲವೇ, ಸುದ್ದಿ9ನ ವರದಿಗಾರ ಅವರು ಘನ ವಾಹನವೊಂದು ಹೋಗಿದೆ, ನೀವು ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದಕ್ಕೆ ಆ ಪೊಲೀಸ್​​ ಸಿಬ್ಬಂದಿಯ ಉತ್ತರ, ಲಾರಿ ಚಾಲಕ ತುಂಬಾ ವೇಗವಾಗಿ ಹೋಗಿದ್ದಾನೆ ಎಂದು ಹೇಳಿದ್ದಾರೆ. ನಂತರ ಲಾರಿ ಡ್ರೈವರ್‌ಗೆ ಎಕವಚನದಲ್ಲಿ ಬೈಗುಳದ ಸುರಿಮಳೆ.

ಇನ್ನು ಕರ್ತವ್ಯಕ್ಕಾಗಿ ಹಾಕಿರುವ ಈ ಸಿಬ್ಬಂದಿ ಬಸ್​​ ನಿಲ್ದಾಣದಲ್ಲಿ ಫೋನ್​​​ ನೋಡುತ್ತಾ ಕೂತಿದ್ದರು ಎಂದು ಹೇಳಲಾಗಿದೆ. ಅಪಾಯದಲ್ಲಿರುವ ಈ ಸೇತುವೆ ಬಗ್ಗೆ ಕಾಳಜಿ ವಹಿಸಬೇಕಾದ ಅಧಿಕಾರಗಳೇ ಈ ರೀತಿ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸದಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಹೇಳಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter