ಗುರುಪುರ ಶ್ರೀ ಕೃಷ್ಣ ಮಿತ್ರ ಮಂಡಳಿಯ ೫೬ನೇ ವರ್ಷದ ಮೊಸರು ಕುಡಿಕೆ ಉತ್ಸವ
ಕೈಕಂಬ : ಭಾರತದ ಹಿಂದೂಗಳೆಲ್ಲ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕು. ಒಗ್ಗಟ್ಟಿಲ್ಲದೆ ಹೋದಲ್ಲಿ ನಮ್ಮನ್ನು ತುಂಡು ತುಂಡು ಮಾಡಲು ಹವಣಿಸುತ್ತಿರುವ ದುಷ್ಟಮತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಹಿಂದೂತ್ವದ ಪರ ಒಗ್ಗೂಡುವ ಅನಿವಾರ್ಯತೆ ಬಂದೊಗಿದೆ ಎಂಬ ಎಚ್ಚರ ಸದಾ ನಮ್ಮಲ್ಲಿರಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಗುರುಪುರದ ಶ್ರೀ ಕೃಷ್ಣ ಮಿತ್ರ ಮಂಡಳಿಯ ೫೬ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು.
ಚಾಟರ‍್ಡ್ ಅಕೌಂಟೆAಟ್(ಸಿಎ) ಗುರುಪುರ ರಾಜಾರಾಮ ಶೆಣೈ ಮಾತನಾಡಿ, ಹಿಂದೂ ಸಂಸ್ಥೆಯೊAದು ಸಮಾಜದ ಒಳಿತು ಬಯಸಿ ಆಯೋಜಿಸುವ ಈ ಉತ್ಸವ ಅಪೂರ್ವವಾದುದು. ಅಶಕ್ತರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಗುರುತಿಸಿ ಗೌರವಿಸುವ ಮೂಲಕ ಶ್ರೀ ಕೃಷ್ಣನ ತತ್ವಾದರ್ಶಗಳಿಗೆ ನಿಜಾರ್ಥದಲ್ಲಿ ಗೌರವ ಸಲ್ಲಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡಳಿ ಸಂಘಟಿಸಿದ ಪ್ರಥಮ ವರ್ಷದ ಶ್ರೀ ಕೃಷ್ಣ ಮಿತ್ರ' ಪ್ರಶಸ್ತಿ ಸ್ವೀಕರಿಸಿದ ಹೋಟೆಲ್ ಉದ್ಯಮಿ ಸುಧೀರ್ ಕಾಮತ್ ಮಾತನಾಡಿ, ಅಶಕ್ತರಿಗೆ ನೆರವಾಗುವುದು ನಿಜವಾದ ಹಿಂದೂತ್ವ ಎಂದು ನನ್ನ ಗುರುಗಳು ಹೇಳಿದ್ದು ನೆನಪು. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಹಿಂದೂ ಸಮಾಜದಲ್ಲಿ ದಾನಿಗಳ ಕೊರತೆ ಇಲ್ಲ. ನಾನು ಕೈಗೆತ್ತಿಕೊಂಡ ಬಹುತೇಕ ಎಲ್ಲ ಕೆಲಸಗಳಿಗೆ ದಾನಿಗಳ ಸಹಕಾರ ಲಭಿಸಿದೆ. ಹಾಗಾಗಿ ನಾನೇನಾದರೂ ಮಾಡಿದ್ದರೆ ಅದು
ಅವರಿಂದ’ ಎಂಬ ಕೃತಜ್ಞತಾ ಭಾವನೆ ನನ್ನಲ್ಲಿದೆ ಎಂದರು.
ಸಿಎ ಗುರುಪುರ ಮಧುಸೂದನ ಪೈ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಅಧ್ಯಕ್ಷ ಯತೀಶ್ ಕುಲಾಲ್ ಅಲೈಗುಡ್ಡೆ, ಉಪಾಧ್ಯಕ್ಷ ತೇಜಸ್ ಶೆಟ್ಟಿ, ಗೌರವಾಧ್ಯಕ್ಷ ಹರೀಶ್ ಭಂಡಾರಿ, ನಿವೃತ್ತ ಶಿಕ್ಷಕ ಕೂಸಪ್ಪ ಮಾಸ್ಟರ್, ಗುರುಪುರ ಜೆ.ಸಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನಿತೇಶ್ ಕಾಜಿಲಕೋಡಿ, ಬಿಜೆಪಿ ಮುಖಂಡ ಲಕ್ಷö್ಮಣ್ ಶೆಟ್ಟಿಗಾರ, ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮತ್ತು ಪದವಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸರ್ಕಾರಿ ಶಾಲಾಭಿವೃದ್ಧಿಗೆ ನೆರವಾಗಿರುವ ಸಿಎ ಗುರುಪುರ ಮಧುಸೂದನ ಪೈ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೆಲವು ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು. ಮಂಡಳಿಯ ಕಾರ್ಯದರ್ಶಿ ಮಧುರಾಜ್ ಅವರು ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಬಳಿಕ ಗುರುಪುರ ಪೇಟೆಯಾಗಿ ಕುಕ್ಕುದಕಟ್ಟೆಯವರೆಗೆ ಭವ್ಯ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.