ಉಡುಪಿ: ಹೊಂಡ-ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಲಾಂಗ್ ಜಂಪ್ ಸ್ಪರ್ಧೆ ಆಯೋಜಿಸಿದ ಯಮರಾಜ-ಚಿತ್ರಗುಪ್ತ

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹೊಂಡ ಬಿದ್ದ ರಸ್ತೆಯಲ್ಲಿ ಪ್ರೇತ ವೇಷಧಾರಿಗಳಿಗೆ ಯಮರಾಜ ಮತ್ತು ಚಿತ್ರಗುಪ್ತ ವೇಷಧಾರಿಗಳು ಲಾಂಗ್ ಜಂಪ್ ಸ್ಪರ್ಧೆ ಏರ್ಪಡಿಸುವ ಮೂಲಕ ಇಲ್ಲಿನ ಹದಗೆಟ್ಟ ರಸ್ತೆಗಳನ್ನು ಆದಷ್ಟು ಬೇಗ ಸರಿ ಪಡಿಸುವಂತೆ ಶಾಸಕರಿಗೆ ಶಾಸಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಹುತೇಕ ಎಲ್ಲಾ ಕಡೆಗಳಲ್ಲೂ ಕಳಪೆ ಮಟ್ಟದ ಕಾಮಗಾರಿಯ ಕಾರಣದಿಂದ ರಸ್ತೆಗಳಲ್ಲಿ ಹೊಂಡ-ಗುಂಡಿಗಳು ಕಾಣಿಸಿಕೊಳ್ಳುತ್ತದೆ. ಉಡುಪಿಯೂ ಇದಕ್ಕೆ ಹೊರತಿಲ್ಲ. ಹೌದು ಇಲ್ಲಿಯೂ ಕೂಡಾ ಅಲ್ಲಲ್ಲಿ ರಸ್ತೆ ಮಧ್ಯೆ ದೊಡ್ಡ ಗಾತ್ರದ ಹೊಂಡಗಳಾಗಿವೆ. ಸಂಬಂಧಪಟ್ಟ ಸಂಸದ, ಶಾಸಕರಾಗಿರಲಿ ಅಥವಾ ಅಧಿಕಾರಿಗಳಾಗಿರಲಿ ಇದರ ಬಗ್ಗೆ ಗಮನ ಕೊಡುತ್ತಿಲ್ಲ. ಇಂತಹವರಿಗೆ ಬಿಸಿ ಮುಟ್ಟಿಸಲೆಂದೇ ವಿಟ್ಲ ಪಿಂಡಿ ಉತ್ಸವದಲ್ಲಿ ಯಮರಾಜ ಮತ್ತು ಚಿತ್ರಗುಪ್ತ ವೇಷವನ್ನು ಧರಿಸಿದವರು, ಸೀದಾ ಹೊಂಡ ಗುಂಡಿಗಳೀಮದ ತುಂಬಿದ ರಸ್ತೆ ಬಳಿ ಹೋಗಿ, ಅಲ್ಲಿಯೇ ಪ್ರೇತ ವೇಷಧಾರಿಗಳಿಗೆ ಲಾಂಗ್ ಜಂಪ್ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ಈ ಹಾಸ್ಯಮಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇತ್ತ ಕಡೆ ಗಮನ ಹರಿಸಿ, ರಸ್ತೆ ಸಮಸ್ಯೆಯನ್ನು ಬಗೆ ಹರಿಸಿ ಎಂದು ಎಲ್ಲರು ಮನವಿ ಮಾಡಿದ್ದಾರೆ.