ಉಡುಪಿ: ಹೆಣ್ಮಕ್ಕಳೇ ರೈಲಿನಲ್ಲಿ ಪ್ರಯಾಣಿಸುವಾಗ ಎಚ್ಚರ, ಇಂತಹ ಕಾಮುಕರು ಇರುತ್ತಾರೆ ನೋಡಿ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅನೇಕ ಹಿಂದೂ ಸಂಘಟನೆಗಳು ಹೇಳುತ್ತಿದೆ. ಇದೀಗ ಈ ಆರೋಪಕ್ಕೆ ಪುಷ್ಠಿ ನೀಡುವಂತಹ ಘಟನೆಗಳೇ ನಡೆಯುತ್ತಿದೆ. ಅದರಲ್ಲೂ ಉಡುಪಿಯಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿದೆ. ಇತ್ತೀಚಿಗೆ ಹಿಂದೂ ಯುವತಿಗೆ ಮಾದಕ ವ್ಯಾಸನ ನೀಡಿ ಅತ್ಯಾಚಾರ ಮಾಡಿರುವ ಘಟನೆ ನಡೆದು ಒಂದು ತಿಂಗಳು ಆಗಿಲ್ಲ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ವ್ಯಕ್ತಿ. ಇದೀಗ ಈ ಬಗ್ಗೆ ಮಾಹಿತಿ ಪಡೆದು ಮಣಿಪಾಲ ಪೊಲೀಸರು 24 ಗಂಟೆಯಲ್ಲಿ ಆರೋಪಿ ಬಂಧಿಸಿದ್ದಾರೆ.
ಭಟ್ಕಳದ ಮುಹಮ್ಮದ್ ಶುರೈಂ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಯುವತಿ ನೀಡಿದ್ದ ಫೋಟೋ ಆಧರಿಸಿ ತನಿಖೆ ಪೊಲೀಸರು ತನಿಖೆ ನಡೆಸಿದ್ದಾರೆ. ರೈಲಿನಲ್ಲಿ ಪ್ರಯಾಣಿಸಿದ್ದ ಎಲ್ಲ ಪ್ರಯಾಣಿಕರ ವಿವರ ಪೊಲೀಸರು ಪಡೆದಿದ್ದಾರೆ.
ನಂತರ ಆತನ ಬಗ್ಗೆ ರೈಲ್ವೆ ಇಲಾಖೆಯಲ್ಲೂ ವಿಚಾರಣೆ ಮಾಡಿ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಪ್ರಯಾಣಿಸಿದ್ದರು. ಹಾಗಾಗಿ ಯಾರು ಈ ಕೃತ್ಯವನ್ನು ಮಾಡಿದ್ದರೆ ಎಂದು 3 ಹಂತಗಳಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು.
ಕೊನೆಗೆ ಭಟ್ಕಳದಲ್ಲಿ ಇಳಿದು ಮುಹಮ್ಮದ್ ಶುರೈಂ ಆರೋಪಿ ಎಂದು ಹೇಳಲಾಗಿದೆ. ಇದರ ಜತೆಗೆ ಸಿಸಿಟಿವಿ ಫೂಟೇಜ್, ಪ್ರಯಾಣಿಕರ ವಿವರ ಆಧರಿಸಿ ಕಾರ್ಯಾಚರಣೆ ಕೂಡ ನಡೆಸಲಾಗಿತ್ತು.