ಉಡುಪಿ; ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಕೇಸ್ಗೆ ಟ್ವಿಸ್ಟ್, ಬಿಜೆಪಿ ಕಾರ್ಯಕರ್ತನ ಬಂಧನ
ಉಡುಪಿಯಲ್ಲಿ ಯುವತಿಯೊಬ್ಬಳಿಗೆ ಮಾದಕ ಪದಾರ್ಥ ನೀಡಿ ಅತ್ಯಾಚಾರ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ಆರೋಪಿ ಅಲ್ತಾಫ್ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪುಯಾಗಿ ಬಿಜೆಪಿಯ ಕಾರ್ಯಕರ್ತ ಎಂದು ಗುರುತಿಸಿಕೊಂಡಿರುವ ಅಭಯ್ ಅವರನ್ನು ಬಂಧಿಸಲಾಗಿದೆ. ಇನ್ನು ಆರೋಪಿ ಅಲ್ತಾಫ್ ಇತನೇ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.
3ನೇ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತನ ಎನ್ನುವ ಆರೋಪಿದೆ ಹಾಗೂ ಫೇಸ್ಬುಕ್ ವಾಲ್ನಲ್ಲಿ ಶಾಸಕ ಸುನಿಲ್ ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಇದೀಗ ಈ ಬಗ್ಗೆ ಭಾರೀ ಕಾರಣವಾಗಿದೆ. ಇತ ಮೊದಲ ಅರೋಪಿ ಅಲ್ತಾಫ್ ಆತ್ಮೀಯನಾಗಿದ್ದ ಎಂದು ಹೇಳಲಾಗಿದೆ.
ಪ್ರಮುಖ ಆರೋಪಿ ಅಲ್ತಾಫ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಮೂವರು ಆರೋಪಿಗಳ ವಿರುದ್ಧ ಸಂತ್ರಸ್ತ ಯುವತಿ ತಾಯಿ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಠಾಣೆಯ ಪೊಲೀಸರು ಇನ್ನೊಬ್ಬ ಅರೋಪಿಗೆ ಬಲೆ ಬೀಸಿದ್ದರು, ಇದೀಗ ಅಭಯ್ ಬಲೆ ಬಿದಿದ್ದಾನೆ. ಇನ್ಸ್ಟಾಗ್ರಾಂನಲ್ಲಿ ಯುವತಿ ಪರಿಚಯ ಮಾಡಿಕೊಂಡಿದ್ದ ಅಲ್ತಾಫ್, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯವೆಸಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ದೂರು ಬಂದಿದೆ. ಸಂತ್ರಸ್ತಿಗೆ ಆರೋಪಿ ಮೂರು ತಿಂಗಳಿಂದ ಪರಿಚಯವಿತ್ತು. ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಯ ಹೊಂದಿದ್ದರು. ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದ, ಆಕೆ ಬಂದಾಗ ಅಲ್ಲಿಂದ ಅಪಹರಿಸಿದ್ದಾರೆ ಎಂದು ಹೇಳಿದ್ದಾರೆ.