ಬಂಟ್ವಾಳ: ಶ್ರೀಶಾರದಾ ಯುವಕ ಮಂಡಲದ ಶ್ರೀ ಕೃಷ್ಣ ಜನ್ಮಾಷ್ಟಮಿ 50 ನೇ ಸುವರ್ಣಮಹೋತ್ಸವ ಸಂಭ್ರಮ

ಶ್ರೀಶಾರದಾ ಯುವಕ ಮಂಡಲ ರಿ ಶಾರದಾನಗರ ಸಜೀಪ ಮುನ್ನೂರು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ 50 ನೇ ಸುವರ್ಣ ಮಹೋತ್ಸವದ ಕಾರ್ಯಕ್ರಮವು ಆಗಸ್ಟ್ 26 ರಂದು ನಡೆಯಿತು. ಸೋಮವಾರ ಬೆಳಗ್ಗೆ ಗಣಹೋಮ ಹಾಗೂ ದೇವರ ಪ್ರಾರ್ಥನೆಯೂ ನೆರವೇರಿತು. ಆ ಬಳಿಕ ಕೃಷ್ಣ ವೇಷಧಾರಿಗಳೊಂದಿಗೆ ಚಂಡೆ ವಾದನ, ಗೊಂಬೆ ಕುಣಿತ ಸುಮಂಗಳಿಯರಿಂದ ಕಳಸ ಅತಿಥಿಗಳೊಂದಿಗೆ ಈ ಮೆರವಣಿಗೆಯೂ ಶ್ರೀಶಾರದಾ ಯುವಕ ಮಂಡಲದ ಶಾರದಾ ಕ್ರೀಡಾಂಗಣದತ್ತ ಸಾಗಿತು.
ಈ ಕ್ರೀಡಾ ಕೂಟದ ಉದ್ಘಾಟನೆಯನ್ನು ತುಳು ಅಕಾಡೆಮಿ ಮಾಜಿ ಅಧ್ಯಕ್ಷರಾದ ಎ. ಸಿ ಭಂಡಾರಿ ನೆರವೇರಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಎಮ್ ಸೂರ್ಯ ನಾರಾಯಣ ಭಟ್, ಶಂಕರ್ ಯಾನೆ ಸುನೀತ್ ಪೂಜಾರಿ, ಶ್ರೀ ನಾಲ್ಕೈತ್ತಾಯ ದೈವದ ಪಾತ್ರಿಗಳು, ಅರ್ಚಕಾರ ತಿಮ್ಮಪ್ಪ, ಶಾರದಾ ಮಂದಿರದ ಸ್ಥಾಪಕ ಅಧ್ಯಕ್ಷರಾದ ಸದಾನಂದ ಪೂಜಾರಿ, ಪಂಚಾಯತ್ ಸದಸ್ಯರಾದ ಪ್ರವೀಣ್, ಪಂಚಾಯತ್ ಸದಸ್ಯರಾದ ಸಂದೀಪ್ ಮಾರ್ನೆ ಬೈಲು, ಸುಂದರ ಪೂಜಾರಿ, ಸರೋಜಿನಿ, ಚಂದ್ರಕಲಾ ದಾಸರಗುತ್ತು ಹಾಗೂ ಯುವಕ ಮಂಡಲದ ಅಧ್ಯಕ್ಷರಾದ ಪರಮೇಶ್ವರ್ ಶಾರದಾನಗರ ಮತ್ತಿತ್ತರರು ಉಪಸ್ಥಿತರಿದ್ದರು. ತದನಂತರದಲ್ಲಿ ಮಕ್ಕಳ ಕ್ರೀಡಾ ಸ್ಪರ್ಧೆಯೂ ಪ್ರಾರಂಭಿಸಲಾಯಿತು.