Published On: Mon, Aug 26th, 2024

ಯಕ್ಷಗಾನ ಕಲೆಗೆ ಅಪಚಾರ: ದಂಧೆ ನಿಷೇಧಿಸುವಂತೆ ಆಗ್ರಹಿಸಿ ಡಿ.ಸಿ.,ಪೊಲೀಸ್ ಅಧೀಕ್ಷಕರಿಗೆ ಮನವಿ

ಬಂಟ್ವಾಳ:ಯಕ್ಷಗಾನದ ವೇಷಭೂಷಣ ತೊಟ್ಟು,ಬಿಕ್ಷಾಟನೆಗೈದು ಯಕ್ಷಗಾನ ಕಲೆಗೆ ಅಪಚಾರವೆಸಗಲಾಗುತ್ತಿದ್ದು ,ಈ ದಂಧೆಯನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯ ಪ್ರಶಸ್ತಿ ಪುರಸ್ಕೃತ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.


ವಿಶ್ವವ್ಯಾಪಿ ಕಲೆಯಾಗಿ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಗೆ ಅದರದ್ದೇ ಆದ ಘನತೆ ,ಗಾಂಭೀರ್ಯತೆ ಇದ್ದು,ಕರಾವಳಿಜಿಲ್ಲೆಯ ಶ್ರೇಷ್ಠ ಕಲೆಯಾಗಿದೆ. ಶ್ರೀಕೃಷ್ಣ ಜನ್ಮಾಷ್ಠಮಿ, ಶ್ರೀಗಣೇಶೋತ್ಸವ ಹಾಗೂ ನವರಾತ್ರಿಯ ಸಂದರ್ಭದಲ್ಲಿ  ಯಕ್ಷಗಾನ ವೇಷಭೂಷಣವನ್ನು ಧಾರಣೆ ಮಾಡಿಕೊಂಡು ಹಗಲಿಡಿ ಬಿಕ್ಷಾಟನೆಗೈಯುತ್ತಿರುವುದಲ್ಲದೆ ಅಪಚಾರವಾಗುವ ರೀತಿಯಲ್ಲಿ  ವರ್ತಿಸಲಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.


ಇದು ಯಕ್ಷಗಾನದಲ್ಲಿ ಅನೇಕ ವರ್ಷದಿಂದ ದುಡಿಯುವ ಹಿರಿಯ ಮತ್ತು ಕಿರಿಯ ಯಕ್ಷಗಾನ ಕಲಾವಿದರಿಗೆ ಮನಸ್ಸಿಗೆ ನೋವು ಮತ್ತು ಬೇಸರವನ್ನು ತರಿಸಿದೆ.ಮುಂದಿನ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯಕ್ಷಗಾನದ ವೇಷಭೂಷಣತೊಟ್ಟು,ಮುಖಕ್ಕೆ ಬಣ್ಣಬಳಿದು,ಕಾಲಿಗೆ ಗೆಜ್ಜೆಕಟ್ಟಿ ಬೀದಿ,ಬೀದಿ ಅಲೆದು ಬಿಕ್ಷಾಟನೆ ಮಾಡುವುದನ್ನು ನಿಷೇಧಿಸುವಂತೆ ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ ಅವರ ನಿಯೋಗ ಸಮಸ್ತ ಯಕ್ಷಗಾನ ಕಲಾವಿದರು ಮತ್ತು ಯಕ್ಷ ಪ್ರೇಮಿಗಳ ಪರವಾಗಿ ಮನವಿ ಮೂಲಕ ಒತ್ತಾಯಿಸಿದೆ.
ಬಾಡಿಗೆದಾರರ ಗಮನಕ್ಕೆ:
ಅದೇರೀತಿ  ಶ್ರೇಷ್ಠ ಕಲೆಯಾದ ಯಕ್ಷಗಾನಕ್ಕೆ ಸಂಬಂಧಪಟ್ಟ ಪರಿಕರಗಳನ್ನು ಕೂಡ ಬಾಡಿಗೆಯ ರೂಪದಲ್ಲಿಯು ನೀಡದಂತೆಯು ಈ ಮೂಲಕ ಅವರು ಕೋರಿದ್ದಾರಲ್ಲದೆ  ಈ ವಿಚಾರದ ಗಂಭೀರತೆಯನ್ನು ಅರಿತುಕೊಂಡು ಹಬ್ಬ ಹರಿದಿನಗಳಲ್ಲಿ ಯಕ್ಷಗಾನದ ವೇಷ, ಭೂಷಣ ಧಾರಣೆ ಮಾಡಿಕೊಂಡು  ಬಂದಲ್ಲಿ  ಸ್ಥಳೀಯ ಪೊಲೀಸ್  ಠಾಣೆ ಅಥವಾ 112 ನಂಬರಿಗೆ ತುರ್ತು ಕರೆ ಮಾಡಿ ಮಾಹಿತಿ ನೀಡುವಂತೆಯು ಸರಪಾಡಿ ಅಶೋಕ ಶೆಟ್ಟಿ ತಿಳಿಸಿದ್ದಾರೆ.
ನಿಯೋಗದಲ್ಲಿ ಯಕ್ಷಗಾನ ಚಿಕ್ಕ ಮೇಳಗಳ ಒಕ್ಕೂಟ ಹಾಗೂ ಜಿಲ್ಲಾ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಪದಾಧಿಕಾರಿಗಳು ಹಾಜರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter