ಐಡಿಯಾಥಮ್ ಸ್ಫರ್ಧೆಯಲ್ಲಿ ಬಹುಮಾನ
ಬಂಟ್ವಾಳ: ಇಸ್ರೋ ಯಶಸ್ವಿಯಾಗಿ ಚಂದ್ರನಲ್ಲಿ ತನ್ನ ಉಪಗ್ರಹವನ್ನು ಇಳಿಸಿ ಚರಿತ್ರಾರ್ಹ ಸಾಧನೆಯನ್ನು ಮಾಡಿದ ನೆನಪಿಗಾಗಿ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಬಂಟ್ಚಾಳ ವಿದ್ಯಾಗಿರಿ ಎಸ್.ವಿ.ಎಸ್. ಇಂಗ್ಲೀಷ್ ಆಂಗ್ಲ ಮಾಧ್ಯಮ ಸ್ಕೂಲ್ ನ ೫ ಎ.ಟಿ.ಎಲ್. ವಿದ್ಯಾರ್ಥಿಗಳು ಭಾಗವಹಿಸಿ ಐಡಿಯಾಥಮ್ ಸ್ಫರ್ಧೆಯಲ್ಲಿ ಕೃಷ್ಣ ಪ್ರಥಮ ಸ್ಥಾನ ಹಾಗೂ ಅನುಷ್ ಎನ್ ಇವರು ತೃತೀಯ ಸ್ಥಾನ ಪಡೆದಿದ್ದಾರೆ.
ಇವರಿಗೆ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್ , ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ. ರೇಖಾ ಶೆಣೈ, ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.