ಬಂಟ್ವಾಳ:ಅ.27 ಕ್ಕೆ 73 ನೇ ವರ್ಷದ ಮೊಸರುಕುಡಿಕೆ ಉತ್ಸವ
ಬಂಟ್ವಾಳ:ಇಲ್ಲಿನ ಭಂಡಾರಿಬೆಟ್ಟು ಶ್ರೀ ಕೃಷ್ಣ ಮಂದಿರದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರುಕುಡಿಕೆ ಸಮಿತಿಯ ವತಿಯಿಂದ 73 ನೇ ವರ್ಷದ ಮೊಸರುಕುಡಿಕೆ ಉತ್ಸವವು ಆ.27 ರಂದು ಭಂಡಾರಿಬೆಟ್ಟು ಎಸ್ ವಿ ಎಸ್ ಪ್ರೌಢಶಾಲಾ ಮೈದಾನದಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಆ.26 ರಂದು ಬೆಳಿಗ್ಗೆ ಗಣಹೋಮ ,ಪ್ರಸಾದ ವಿತರಣೆ ಸಂಜೆ ಭಜನಾಕಾರ್ಯಕ್ತಮ,ರಾತ್ರಿ ಮಹಾಪೂಜೆ,ಪ್ರಸಾದ ವೊತರಣೆ ನಡೆಯಲಿದೆ.ಆ. 27 ರಂದು ಬೆಳಿಗ್ಗೆ ಶ್ರೀಕೃಷ್ಣನ ಪ್ರತಿಬಿಂಬದ ವೈಭವಪೂರ್ಣ ಮೆರವಣಿಗೆಯು ಬಂಟ್ವಾಳ ನಗರದಲ್ಲಿ ಸಾಗಿ ಬೈಪಾಸ್ ರಸ್ತೆಯ ಮೂಲಕ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
ಬಳಿಕ ವಿವಿಧ ಪುರುಷರು,ಮಹಿಳೆಯರು,ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ,ಸಂಜೆ ಸಭಾಕಾರ್ಯಕ್ರಮವು ನಡೆಯಲಿದ್ದು,ಈ ಸಂದರ್ಭದಲ್ಲಿ ಪ್ರತಿಭಾಪುರಸ್ಕಾರ,ಬಹುಮಾನ ವಿತರಣೆ ಮಡೆಯುವುದು ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.