ಸಜೀಪ: ಶ್ರೀಕೃಷ್ಣ ಜನ್ಮಾಷ್ಠಮಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ
ಬಂಟ್ವಾಳ: ತಾಲೂಕಿನ ಸಜೀಪಮುನ್ನೂರು ಗ್ರಾಮದ ಶ್ರೀ ಶಾರದಾ ಯುವಕ ಮಂಡಲ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಆ.26,27,28 ರಂದು ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಪರಮೇಶ್ವರ ಶಾರದಾನಗರ ಅವರು ಹೇಳಿದ್ದಾರೆ.
ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,1975 ರಲ್ಲಿ ಸದಾನಂದ ಪೂಜಾರಿ ಹಾಗೂ ಗೆಳೆಯರು ಸೇರಿಕೊಂಡು ಅಸ್ತಿತ್ವಕ್ಕೆ ತಂದ ಯುವಕ ಮಂಡಲ ಶಾರದಾ ನಗರದಲ್ಲಿ ಶ್ರೀಕೃಷ್ಣಾಷ್ಟಮಿ ಮೊಸರು ಕುಡಿಕೆ, ಶ್ರೀ ಶಾರದಾ ಕ್ರೀಡಾ ಕೂಟ ಸಹಿತ ಸಾಮಾಜಿಕ ಚಟುವಟಿಕೆಯನ್ನು ನಡೆಸುತ್ತಾ ಬರುತ್ತಿದ್ದರು ಎಂದರು.
ಕೆಲ ವರ್ಷಗಳಿಂದ ಶ್ರೀ ಶಾರದಾ ಕ್ರೀಡಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಗ್ರಾಮಸ್ಥರ ಮತ್ತು ಸಂಘದ ಸದಸ್ಯರ ಸಹಕಾರದೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ.ಈ ಬಾರಿ 50ನೇ ವರ್ಷ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ 3 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಆ. 26 ರಂದು ಬೆಳಿಗ್ಗೆ ಗಣಹೋಮ ಶ್ರೀ ಶಾರದಾಬಿಂಕಾ ಮಂದಿರದಿಂದ ಶ್ರೀ ಶಾರದಾ ಕ್ರೀಡಾಂಗಣಕ್ಕೆ ಪುಟಾಣಿ ಮಕ್ಕಳ ಶ್ರೀಕೃಷ್ಣ ವೇಷಧಾರಿಗಳ ವೈಭವದ ಮೆರವಣಿಗೆಯ ನಡೆಯಲಿದೆ ನಂತರ ಕ್ರೀಡಾಕೂಟ ಉದ್ಘಾಟನೆ, ಸಂಜೆ ಸಮಾರೋಪ ಸಮಾರಂಭ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ವಿವರಿಸಿದರು.
ಆ. 27 ಬೆಳಿಗ್ಗೆ 9 ಗಂಟೆಗೆ “ಕೆಸರ್‌ದ ಗೊಬ್ಬು” ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಹಡೀಲು ಗದ್ದೆಯಲ್ಲಿ ಕೆಸರು ಗದ್ದೆಯನ್ನಾಗಿ ಪರಿವರ್ತಿಸಲಾಗಿದ್ದು,ವಿವಿಧ ಕ್ರೀಡೆ ನಡೆಯಲಿರುವುದು. ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಬಹುಮಾನ ವಿತರಣೆ ಹಾಗೂ ಸ್ಥಳಿಯ ಮಕ್ಕಳಿಂದ ಸಾಂಸ್ಕೃತಿಕ ಮತ್ತು ಹಾಸ್ಯ ಕಾರ್ಯಕ್ರಮ ನಡೆಯಲಿದೆ.ಎರಡು ದಿನದ ಬಳಿಕ ಈ ಹಡೀಲು ಗದ್ದೆಯಲ್ಲಿ ಎಂದು ಭತ್ತದ ನಾಟಿ ಮಾಡಲಾಗುವುದು ಎಂದು ಯುವಕಮಂಡಲದ ಲೆಕ್ಕ ಪರಿಶೋಧಕ ವಿಜೇಶ್ ಕುಮಾರ್ ತಿಳಿಸಿದರು.
ಆ. 28 ರಂದು ಸಂಜೆ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭವು ರಾಜಕೀಯ, ಸಾಮಾಜಿಕ ಮುಖಂಡರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿನಡೆಯಲಿದ್ದು,ಈ ಸಂದರ್ಭ
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
, 2023-2024 ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ, ಬಹುಮಾನ ವಿತರಣೆ ನಡೆಯಲಿದೆ.ರಾತ್ರಿ ನಾಟಕ ಇರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ
ಗೌರವಾಧ್ಯಕ್ಷ ತಿಮ್ಮಪ್ಪ ಬೆಳ್ಳಾಡ, ಪ್ರಸಾದ್ ಪೂಜಾರಿ ಕುಡಾರ್‌ಲಚ್ಚಿಲ್, ಶಿವಾನಂದ ಕುಡಾರ್‌ಲಚ್ಚಿಲ್ ಉಪಸ್ಥಿತರಿದ್ದರು.