ಮಂಗಳೂರು: ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆಯಿಂದ ಮುಲ್ಲರ್ ಪಟ್ಣ ಸೇತುವೆ ಕುಸಿದಂತೆ ಪೊಳಲಿ ಸೇತುವೆಯೂ ಕುಸಿಯುವ ಆತಂಕವಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆತಂಕ ವ್ಯಕ್ತ ಪಡಿಸಿದ್ದು, ಅಡ್ಡೂರು ಬಳಿ ಅಕ್ರಮ ಮರಳುಗಾರಿಕೆ ತಕ್ಷಣ ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಈ ಹಿಂದೆ ಹಲವು ಬಾರಿ ಅಕ್ರಮ ಮರಳುಗಾರಿಕೆಯ ಬಗ್ಗೆ ಸಾಕ್ಷ್ಯ ಸಮೇತ ಜಿಲ್ಲಾಧಿಕಾರಿ ಸಹಿತ ಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೂ ನಿಲ್ಲಿಸಲು ಸಾಧ್ಯವಾಗಿಲ್ಲ, ಎಲ್ಲಿಯವರೆಗೆ ಎಂದರೆ ಅಕ್ರಮ ಮರಳುಗಾರಿಕೆಯನ್ನು ಸೇತುವೆ ಬುಡದಲ್ಲಿ ಮಾಡುವುದರಿಂದ ಇದೀಗ ಇಲ್ಲಿನ ಸೇತುವೆ ದುರಸ್ತಿಗೆ ಬಂದು ನಿಂತಿದೆ.

ಕೋಟ್ಯಾಂತರ ರೂ ಖರ್ಚು ಮಾಡಬೇಕಾದ ಸ್ಥಿತಿಯಿದೆ. ಆದರೂ ಇದೇ ರೀತಿ ಮರಳುಗಾರಿಕೆ ಆದಲ್ಲಿ ಸೇತುವೆಗೆ ಉಳಿಗಾಲವಿಲ್ಲ ಇಂತಹ ಅಕ್ರಮ ಮರಳುಗಾರಿಕೆ ಶಾಶ್ವತವಾಗಿ ನಿಲ್ಲಿಸಲು ಕ್ರಮ ಜರಗಿಸಬೇಕು ಮುಂದೆ ಇನ್ನಷ್ಟು ಸಮಸ್ಯೆಯಾದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು.

ಸುದ್ದಿ ಗೋಷ್ಟಿ ಯಲ್ಲಿ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಪ್ರಮುಖರಾದ ಸಂದೀಪ್ ಪಚ್ಚನಾಡಿ, ಭರತ್ ರಾಜ್ ಕೃಷ್ಣಾಪುರ, ಶ್ರವಣ್ ಶೆಟ್ಟಿ, ಆಶ್ರಿತ್ ನೋಂಡಾ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *