ಅ. 25 ಕ್ಕೆ ಬಿ.ಸಿ.ರೋಡಿನಲ್ಲಿಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜನ್ಮ ದಿನಾಚರಣೆ ಸಮಾರಂಭ
ಬಂಟ್ವಾಳ:ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ(ರಿ.)ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ
170ನೇ ಜನ್ಮ ದಿನಾಚರಣೆ ಸಮಾರಂಭವು ಅ. 25 ರಂದು ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ ಗಂಟೆ 10ರಿಂದ ಗುರುಪೂಜೆ, 10.30ಕ್ಕೆ ಮಹಾಪೂಜೆ, ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ.ಮಧ್ಯಾಹ್ನ 2ರಿಂದ: ಬಂಟ್ವಾಳ ತಾಲೂಕು ಬಿಲ್ಲವ ಸಂಘ, ಬಿಲ್ಲವ ಮಹಿಳಾ ಸಮಿತಿ ಹಾಗೂ ಯುವವಾಹಿನಿ(ರಿ.) ಬಂಟ್ವಾಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಮಧ್ಯೆ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಸಭಾಕಾರ್ಯಕ್ರಮ ಜರಗಲಿದ್ದು,ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಪ್ರಸ್ತಾವನೆಗೈಯಲಿದ್ದಾರೆ.ಕೊಡಪದವಿನ ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಪೂಜಾರಿ ಉಪನ್ಯಾಸ ಇದೇ ವೇಳೆ ಪ್ರಜ್ವಲ್‌ಕುಮಾರ್ ಕಾವಳಮೂಡೂರು(ಸಿಎ-ಶೈಕ್ಷಣಿಕ ಕ್ಷೇತ್ರ), ಸಿದ್ಧಾರ್ಥ್ ಎಂ.ಸಿ.(ಟಾರ್ಗೆಟ್ ಬಾಲ್-ಕ್ರೀಡಾ ಕ್ಷೇತ್ರ),
ಕು. ರಕ್ಷಾ ಜಿ.(,ವೈಟ್ ಲಿಫ್ಟಿಂಗ್-ಕ್ರೀಡಾಕ್ಷೇತ್ರ),
ಕು. ಶರಣ್ಯ ಎನ್.ಟಿ.(ಅಕ್ಕಮಹಾದೇವಿ ಪ್ರಶಸ್ತಿ ವಿಜೇತರು-ಕ್ರೀಡಾ ಕ್ಷೇತ್ರ) ಇವರನ್ನುಸನ್ಮಾನಿಸಲಾಗುವುದುಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ