ಬಂಟ್ವಾಳ :ಬೆಂಗಳೂರಿನ ಥಣಿಸಂದ್ರದಲ್ಲಿ‌  ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ
ಈಜು ಸ್ಪರ್ಧೆಯಲ್ಲಿ ಸಹೋದರಿಯರುರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.


  14 ವರ್ಷ ಒಳಗಿನ ಹುಡುಗಿಯರ ಈಜು  ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀ  ರಾಮ ಪ್ರಾಥಮಿಕ ಶಾಲೆಯ 6 ತರಗತಿಯ ವಿದ್ಯಾರ್ಥಿನಿ
ಅನನ್ಯ ಎ ಆರ್    200 ಮೀ. ಬಟರ್ ಫ್ಲೈ ಮತ್ತು  4× 100 ಮೀ  ಫ್ರೀಸ್ಟೈಲ್ ರಿಲೇ ಯಲ್ಲಿ 2 ಬೆಳ್ಳಿ ಮತ್ತು 200  ಮೀ.ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ.ಇಂಡಿ ವಿಜುವಲ್ ಮೆಡ್ಲೆ ಯಲ್ಲಿ2 ಕಂಚು ಪಡೆದಿರುತ್ತಾಳೆ.


ಹಾಗೆಯೇ‌ ಈಕೆಯ ಅಕ್ಕ ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯ 9 ನೇ ತರಗತಿಯ‌‌ಅನರ್ಘ್ಯ ಎ ಆರ್ 17 ವರ್ಷ ಒಳಗಿನ ಹುಡುಗಿಯರ ಈಜು  ಸ್ಪರ್ಧೆಯಲ್ಲಿ   200 ಮೀ ಇಂಡಿ ವಿಜುವಲ್ ಮೆಡ್ಲೆ  ,400 ಮೀ ಇಂಡಿ ವಿಜುವಲ್ ಮೆಡ್ಲೆ ಮತ್ತು 4×100  ಮೀ  ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಮತ್ತು 200ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.


ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ ಸ್ಪೆಕ್ಟರ್ ಬಿ‌.ಕೆ.ನಾಯ್ಕ್ ಅವರ ಶಿಷ್ಯೆಯ ರಾಗಿದ್ದು ಮಂಗಳೂರಿನ ಅಲೋಶಿಯಸ್ ವಿ.ವನ್ ಈಜು ಕೊಳದ ಮುಖ್ಯ ತರಬೇತುದಾರ ರಾದ ಲೋಕರಾಜ್ ಮತ್ತು ಸ್ಯಾಂಜು ರವರಿಂದ ತರಬೇತಿ ಪಡೆಯುತ್ತಿದ್ದಾರೆ. 

By suddi9

Leave a Reply

Your email address will not be published. Required fields are marked *