ಮಂಗಳೂರು ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ ಮಂಗಳೂರು ಲೇಡೀಸ್ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ (ರಿ ) ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ )ಮಂಗಳೂರು ಡಾ. ಪಿ ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ )ಸೆಂಚುರಿ ಗ್ರೂಪ್ಸ್ ಬೆಂಗಳೂರು ಇದರ ಸಹಯೋಗದಲ್ಲಿಆ. ೨೦ ರಂದು ಮಂಗಳವಾರ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಶ್ರೀ ಹರಿಹರ ವಿಠ್ಠಲ ಪಾಂಡುರAಗ ಭಜನಾ ಮಂದಿರ ಬಿಕರ್ನ ಕಟ್ಟೆ ಕಂಡೆಟ್ಟು ಮೈದಾನದಲ್ಲಿ ಬೆಳಿಗ್ಗೆ ೧೦ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಆಗಮಿಸಿ ಶುಭ ಹಾರೈಸಿದರು.

ಮಂಗಳೂರು ಲೇಡೀಸ್ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷರು ಬಬಿತ ಯು ಶೆಟ್ಟಿ, ಉಪಾಧ್ಯಕ್ಷರು ಸುಲತ ಪೂಜಾರಿ, ಕಮಿಟಿ ಸದಸ್ಯರಾದ ಸವಿತ ಶೆಟ್ಟಿ, ವಿನಲಿ ಕೋಟ್ಯಾನ್, ಮೈನ ಕುಲಾಲ್, ಪ್ರತಿಭಾ ಶೆಟ್ಟಿ, ಇಂದಿರಾ ಮತ್ತು ಸದಸ್ಯರು, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷರಾದ ಆನಂದ್ ಭಂಡಾರಿ, ಮಂಗಳೂರು ತಾಲೂಕು ಸವಿತ ಸಮಾಜದ ಅಧ್ಯಕ್ಷ ಸಂಜಯ್ ಮಹಾಲೆ ಮತ್ತು ಸದಸ್ಯರು,ಪ್ರಸಾದ್ ನೇತ್ರಲಯದ ಡಾ ಅಹನ, ಶ್ರೀ ಹರಿಹರ ವಿಠ್ಠಲ ಪಾಂಡುರAಗ ಭಜನಾ ಮಂದಿರದ ಅಧ್ಯಕ್ಷ, ಕೋಶಧಿಕಾರಿ ಮನೋಹರ್ ರೈ ಉಪಸ್ಥಿತರಿದ್ದರು. ಸಾರ್ವಜನಿಕರು ಮತ್ತು ಸದಸ್ಯರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು