ಉಡುಪಿ: ಮೊಬೈಲ್ ನೀಡದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಉಡುಪಿಯಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಜಿಲ್ಲೆಯ ಹಿರಿಯಡ್ಕದ ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಪ್ರಥಮೇಶ್ (19) ಎಂದು ಹೇಳಲಾಗಿದೆ. ಮನೆಯವರು ಮೊಬೈಲ್ ನೀಡಿದ ಕಾರಣ ಸೋಮವಾರ ಮನೆಯಿಂದ ಕಾಣೆಯಾಗಿದ್ದ, ನೆನ್ನೆ (ಆ.200 ಬೆಳಿಗ್ಗೆ ಕಾಲೇಜು ಸಮೀಪದ ಮನೆಯ ಬಾವಿಯೊಂದರಲ್ಲಿ ಮೃತ ದೇಹ ಪತ್ತೆಯಾಗಿದೆ. ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಎಂದು ಹೇಳಲಾಗಿದೆ. ಜನ ವಸತಿ ಇಲ್ಲದ ಬಾವಿಗೆ ಹಾರಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.