ಕೈಕಂಬ: ಬOಟ್ವಾಳ ತಾಲೂಕಿನ ಕೂರಿಯಾಳ ಗುತ್ತು “ಪಯ್ಯಡೆ ಹೌಸ್ “ಕೆ. ರಘುನಾಥ ಪಯ್ಯಡೆ (೭೮) ಅಲ್ಪಕಾಲದ ಅಸೌಖ್ಯದಿಂದ ಆ.೨೦ ರಂದು ಮಂಗಳವಾರ ಬೆಳಗ್ಗೆ ನಗರದ ಅಸ್ಪತ್ರೆಯಲ್ಲಿ ನಿಧನ ಹೊಂದಿದರು.


ಅವರು ಪ್ರಗತಿಪರ ಕೃಷಿಕರಾಗಿ ಅಮ್ಟಾಡಿ ಮಂಡಲ ಪ್ರಧಾನರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ ಬಡಗಬೆಳ್ಳೂರು ಬಂಟರ ಸಂಘದ ಗೌರವಾಧ್ಯಕ್ಷರು ಅಲ್ಲದೇ ಕುರಿಯಾಳ ಹತ್ತುಸಮಸ್ತರ ಯಕ್ಷಗಾನ ಸಂಘದ ಗೌರವಾಧ್ಯಕ್ಷರು ಆಗಿದ್ದರು.

ಸಾಮಾಜಿಕ-ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ವರ್ಷಂಪ್ರತಿ ಎರಡುದಿನ ಶ್ರೀ ಕಟೀಲು ಮೇಳದ ಹಾಗೂ ಒಂದು ದಿನ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನವನ್ನು ಬಯಲಾಟವಾಗಿ ಊರಿನವರಿಗೆ ಹಬ್ಬದ ವಾತವರಣವನ್ನು ಉಂಟು ಮಾಡಿ ಎಲ್ಲರ ಮೆಚ್ಚುಗೆಯ ಪಯ್ಯಡೆಯವರು ಹಲವಾರು ಸಂಘ ಸಂಸ್ಥೆಗಳಿಗೆ,ವಿದ್ಯಾರ್ಥಿಗಳಿಗೆ ಅನೇಕ ಬಡಜನರಿಗೆ ಸಹಾಯಸ್ತವನ್ನು ನೀಡಿದ ಅವರು ತುಳುನಾಡಿನಲ್ಲಿ ನಡೆಯುವ ದೈವ, ದೇವಸ್ಥಾನಗಳ ಜೀರ್ಣೋದ್ದಾರದಲ್ಲಿ ಭಾಗಿಯಾಗಿ ಕೊಡುಗೈ ದಾನಿಯಗಿದ್ದರು.

ಮೃತರು ಪತ್ನಿ ಇಬ್ಬರು ಪುತ್ರ‍್ರಿಯರನ್ನು , ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

ಗಣ್ಯರಿಂದ ಸಂತಾಪ ಸೂಚನೆ:
ಅವರ ನಿಧನಕ್ಕೆ ದ.ಕ.ಸಂಸದ ಕ್ಯಾ.ಬೃಜೇಶ್‌ಚೌಟ, ಮಾಜಿ ರಾಜ್ಯಾಧ್ಯಕ್ಷ, ನಳಿನ್‌ಕುಮಾರ್ ಕಟೀಲ್,ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಮಾಜಿ ಸಚಿವರಾದ ಬಿ.ರಮಾನಾಥ ರೈ,ಬಿ.ನಾಗರಾಜ್ ಶೆಟ್ಟಿ,ಮಾಜಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಧ್ಯಮಿಗಳಾದ ರಘು ಎಲ್‌ಶೆಟ್ಟಿ, ಕೆ. ಗಂಗಾಧರ ಪೂಜಾರಿ , ದೇವಪ್ಪ ಪೂಜಾರಿ ಹಾಗೂ ಊರಿನ ಅವರ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

ಇವರ ಅಂತಿಮ ವಿಧಿ ವಿಧಾನಗಳು ಆ. ೨೧ ರಂದು ಬುಧವಾರ ಬೆಳಿಗ್ಗೆ ಸುಮಾರು ೧೦.೦೦ ಕ್ಕೆ ಅವರ ಸ್ವಗೃಹದ ಕೂರಿಯಾಳ ಗುತ್ತು ಪಯ್ಯಡೆ ಹಸ್ನ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಪ್ರಕಟನೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *