ಸಿದ್ಧಕಟ್ಟೆ: ಯಕ್ಷಗಾನ ತಾಳಮದ್ದಳೆ ಕೂಟ ಪ್ರಶಸ್ತಿ ಪ್ರದಾನ
ಬಂಟ್ವಾಳ: ಸಿದ್ಧಕಟ್ಟೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹಲವಾರು ಮಂದಿ ಯಕ್ಷಗಾನ ಕಲಾವಿದರು ನಮ್ಮನ್ನು ಅಗಲಿ ಹೋಗಿದ್ದರೂ ಹುಟ್ಟೂರಿನ ಹೆಸರು ಹತ್ತೂರಿನಲ್ಲಿ ಪಸರಿಸಿದ್ದಾರೆ ಎಂದು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದ್ದಾರೆ.

ಇಲ್ಲಿನ ಸಿದ್ಧಕಟ್ಟೆ ಯಲ್ಲಿ ‘ಶ್ರೀ ಕ್ಷೇತ್ರ ಪೂಂಜ ಯಕ್ಷಮಿತ್ರರು’ ಸಂಘಟನೆ ವತಿಯಿಂದ ನಡೆದ 7ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕೂಟ ಕಾರ್ಯಕ್ರಮದಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಎನ್.ಸೀತಾರಾಮ ರೈ ಪೆರಿಂಜೆ ಇವರಿಗೆ ಸಿದ್ಧಕಟ್ಟೆ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.
ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಶಿವಯ್ಯ ಎಸ್.ಎಲ್., ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಶುಭ ಹಾರೈಸಿದರು. ಸಂಯೋಜಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಪ್ರಮುಖರಾದ ರಾಘವೇಂದ್ರ ಭಟ್, ರತ್ನಾಕರ ಶೆಟ್ಟಿ ಮತ್ತಿತರರು ಇದ್ದರು.
ಉಪನ್ಯಾಸ ಡಾ.ಯೋಗೀಶ ಕೈರೋಡಿ ಸ್ವಾಗತಿಸಿ, ಗಣೇಶ ಶೆಟ್ಟಿ ಆರಂಬೋಡಿ ವಂದಿಸಿದರು. ಉಮೇಶ್ ಶೆಟ್ಟಿ ಪಾಲ್ಯ ಕಾರ್ಯಕ್ರಮ ನಿರೂಪಿಸಿದರು.