ಬಂಟ್ವಾಳ: ಎಸ್ ವಿ ಎಸ್ ಕಾಲೇಜಿನಲ್ಲಿ ಸದ್ಭಾವನಾ ದಿನ ಆಚರಣೆ
ಬಂಟ್ವಾಳ: ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ಮಂಗಳವಾರ ‘ಸದ್ಭಾವನಾ ದಿನ’ವನ್ನು ಆಚರಿಸಲಾಯಿತು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಸದ್ಭಾವನಾ ದಿನದ ಮಹತ್ವವನ್ನು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್. ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವಣ್ಣ ಪ್ರಭು ಉಪಸ್ಥಿತರಿದ್ದರು.